ಬುಡಕಟ್ಟು ಜನರು ಸಾಮಾನ್ಯವಾಗಿ ಕಾಡುಮೇಡುಗಳ ಹುಲ್ಲುಗಾವಲಿನಲ್ಲಿ ದೊರೆಯುತ್ತಿದ್ದ ಸಾವಿರಾರು ಧಾನ್ಯಗಳಲ್ಲಿ ಭತ್ತ, ಜೋಳ, ಗೋಧಿಯಂತಹ ಕೆಲವೇ ಕೆಲವು ಧಾನ್ಯಗಳನ್ನು ಬಳಕೆಗೆ ತಂದವರು.
ರೈತರು, ನೇಕಾರರು, ಬೆಸ್ತರು, ಕುಂಬಾರರು, ನಾಟಿ ವೈದ್ಯರು, ಕಮ್ಮಾರರು ಇದನ್ನು ತಮ್ಮ ಅನುಭವದ ಮೂಲಕ ಯಾವ ನಾರಿನಿಂದ ಬಟ್ಟೆ ನೇಯಬಹುದು, ಯಾವ ಲೋಹ ಕರಗಿಸಿ ಕುಟ್ಟಿದರೆ ಪಾತ್ರೆಯ ರೂಪ ಕೊಡಬಹುದು ಎಂಬುದನ್ನು ಅರಿತುಕೊಂಡರು. ತಮ್ಮ ಸ್ವಂತ ಪರಿಶ್ರಮದಿಂದ ರೂಪುಗೊಂಡ ಸಸ್ಯಜ್ಞಾನ, ಪ್ರಾಣಿಜ್ಞಾನ, ಕೀಟಜ್ಞಾನ, ಖನಿಜ ಜ್ಞಾನ, ಲೋಹವಿದ್ಯೆ, ನೇಯ್ಗೆ, ಪಶುಸಂಗೋಪನೆ, ಬೇಟೆ ಕೌಶಲ ಮೊದಲಾದ ಜ್ಞಾನಗಳ ಶೋಧಕರಾಗಿ ಬುಡಕಟ್ಟು ಜನರ ಪರಂಪರೆಯನ್ನುಬೆಳಕಿಗೆ ತಂದರು.
ಇಂತಹ ಬುಡಕಟ್ಟು ಜ್ಞಾನ ಪರಂಪರೆಯು ಮನುಕುಲದ ಆದಿಯಿಂದ ಇಂದಿನವರೆಗಿನ ಪರಿಚಯಿಸಿದ ಕೃಷಿ, ಪಶುಪಾಲನೆ, ಸಾಹಿತ್ಯ, ದೈವತ್ವ, ಆಧ್ಯಾತ್ಮ-ಅನುಭಾವಿಕ ಜ್ಞಾನ, ನ್ಯಾಯ ಸಮ್ಮತೆ, ಕಾಲ ಜ್ಞಾನ, ಕಲಾ ಜ್ಞಾನ, ಜಲಶೋಧ, ಚರಿತ್ರೆ ಮೂಂತಾದವುಗಳ ಬಗ್ಗೆ ತಿಳಿಸಿಕೊಡುವ ಪುಸ್ತಕ ಲೇಖಕ ಎಸ್.ಎಂ. ಮುತ್ತಯ್ಯ ಅವರು ಬರೆದಿರುವ ’ಬುಡಕಟ್ಟು ಜ್ಞಾನಪರಂಪರೆ’ .
©2025 Book Brahma Private Limited.