ಮೂರು ಲೇಖನಗಳ ಸಂಗ್ರಹ -ಕಥಾವಸ್ತುವಾಗಿ ಸಂಕೇತಿಗಳು. ಮೊದಲ ಎರಡು ಕಥೆಗಳು ಸಂಕೇತಿ ಸಮುದಾಯಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ಲೇಖಕರು ಪರಿಶೀಲಿಸಿರುವಂತೆಯೇ ಮೂರನೆಯದು ಹೇಗೆ ಸಂಬಂಧಿಸಿದ್ದಲ್ಲ ಎಂಬುದನ್ನು ವಿವರಿಸಿದ್ದಾರೆ. `ಭಲ್ಲೂಕಪುರದ ಅಪ್ಪಾಜಿಭಟ್ಟ' ಎಂಬುದು ಸಂಕೇತಿ ಸಮುದಾಯದ ಗೃಹಸ್ಥನೊಬ್ಬನ ಜೀವನದಲ್ಲಿ ನಡೆದ ಘಟನೆಯನ್ನಾಧರಿಸಿದ್ದು; ನಿಜ ಘಟನೆಯು ಐತಿಹ್ಯವಾಗಿ ಬೆಳೆದು, ಕಥೆಯಾಗಿ ಅರಳಿನಿಂತ ಸಂದರ್ಭ. `ಡಾ. ಸುಶೀಲಾ ಸಂಕೇತ್' ಎಂಬುದು ಸಂಕೇತಿ ಮಹಿಳೆಯೊಬ್ಬರಿಗೆ ಸಂಬಂಧಿಸಿದ ನೈಜ ಘಟನೆಯನ್ನಾಧರಿಸಿದ್ದು; ಸಂಕೇತಿ ಸುಮುದಾಯದ ಹಳ್ಳಿಯ ಸಂಪ್ರದಾಯಶೀಲ ಪರಿಸರವನ್ನು ಬಳಸಿಕೊಂಡು ಕಲಾತ್ಮಕವಾಗಿ ಬೆಳೆದುದು. ಭೂತಯ್ಯನ ಮಗ ಅಯ್ಯು ಹೆಮ್ಮಿಗೆಯ ಶ್ರೀವೈಷ್ಣವರೊಬ್ಬರಿಗೆ ಸಂಬಂಧಿಸಿದ ಕಥೆ. ಹೆಮ್ಮಿಗೆಯ ಶ್ರೀವೈಷ್ಣವರು ಅನೇಕ ಶತಮಾನಗಳ ಹಿಂದೆ ಸಂಕೇತಿ ಸಮುದಾಯದಿಂದ ಮತಾಂತರವಾದವರು. ತಿಗಳ ಮತ್ತು ಸಂಕೇ ತಿಗಳ ಎಂಬ ಪದಪ್ರಯೋಗಗಳ ಔಚಿತ್ಯವನ್ನು ಪ್ರಶ್ನಿಸಿಕೊಂಡು ಹೊರಟ ಸಂಶೋಧನ ಲೇಖನ.
©2024 Book Brahma Private Limited.