ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚು ಕಂಡು ಬರುವ ಮಾಲ ಸನ್ಯಾಸಿ ಎಂಬ ಅಲೆಮಾರಿ ಸಮುದಾಯದ ಬಗ್ಗೆ ಬಿಳಿದಾಳೆ ಈಶ ಎಂದೇ ಪ್ರಸಿದ್ಧರಾದ ಹಿರಿಯ ಪತ್ರಕರ್ತ ಪಾರ್ವತೀಶ ಅವರು ಬರೆದ ಕೃತಿ ಇದು.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಹರಡಿಕೊಂಡಿರುವ ಬೇಟೆಯನ್ನೇ ವೃತ್ತಿ ಮಾಡಿಕೊಂಡಿರುವ ೀ ಸಮುದಾಯದ ಸಂಸ್ಕೃತಿಯನ್ನು ಹಲವು ವಿವರಗಳಲ್ಲಿ ಕೃತಿಕಾರ ನೀಡಿದ್ದಾರೆ. ಮದುವೆ, ಜನನ, ಸಾವು, ದೈವಾಚಾರಣೆ, ಬೇಟೆ, ಆಹಾರ, ನಾಟಿವೈದ್ಯ ಪದ್ಧತಿ, ಕುಲ ನ್ಯಾಯ ಮೊದಲಾದ ವಿಷಯಗಳನ್ನು ಚರ್ಚಿಸಿದ್ದಾರೆ.
©2024 Book Brahma Private Limited.