ಈ ಕೃತಿ ಬೇಡ ಸಮುದಾಯವನ್ನು ಕುರಿತು ಬಹುನೆಲೆಗಳಲ್ಲಿ ವ್ಯಾಪಕ ಅಧ್ಯಯನ ನಡೆಸಿರುವ 31 ಲೇಖನಗಳ ಸಂಕಲನವಾಗಿದ್ದು ವೇದಪೂರ್ವ ಕಾಲದಿಂದ ಸಮಕಾಲೀನ ಸಂದರ್ಭದವರೆಗೆ ಬೇಡ ಜನಾಂಗವನ್ನು ಕುರಿತು ನಡೆಸಿದ ವ್ಯಾಪಕ ಕ್ಷೇತ್ರಕಾರ್ಯ ಮತ್ತು ಅಧ್ಯಯನದ ಫಲವಾಗಿ ಸಂಗ್ರಹಿತಗೊಂಡ ಅಮೂಲ್ಯ ಮಾಹಿತಿಗಳು ಇಲ್ಲಿ ಒಟ್ಟು ಸೇರಿವೆ. ಬೇಡ ಜನಾಂಗದ ಭಿನ್ನ ನೆಲೆಗಳು, ಸಾಂಸ್ಕೃತಿಕ ವೈವಿಧ್ಯಗಳು, ಪ್ರಾದೇಶಿಕ ಭಿನ್ನತೆಗಳು ಸಾಂಸ್ಕೃತಿಕ ವಿವರಗಳು ಇಲ್ಲಿ ಚರ್ಚಿತವಾಗಿವೆ. ಈ ಕೃತಿಯು ಒಳಗೊಂಡಿರುವ ಆಧ್ಯಾಯಗಳೆಂದರೆ:ವೇದಪೂರ್ವ ಭಾರತದ ಬೇಡ ಮೂಲನಿವಾಸಿಗಳು , ಬೇಡ ಜನಾಂಗದ ನಿಜ ನಿಷ್ಪತ್ತಿ , ಕರ್ನಾಟಕದ ಬೇಡ ಜನಾಂಗ ಉಗಮ, ವಿಕಾಸ, ವರ್ತಮಾನದ ಬದುಕು ,ಕರ್ನಾಟಕದ ಬೇಡ ನಾಯಕರು; ನಾಯಕ ಜನಾಂಗ ಪರಂಪರೆ ,ಬೇಡ ನಾಯಕರ ಬೆಡಗುಗಳ ಪ್ರಾಚೀನತೆ , ಕನ್ನಡ ಶಾಸನಗಳಲ್ಲಿ ಬೇಡ ಜನಾಂಗ , ಮಾಸ ಬೇಡ, ಕಂಪಣ ಬೇಡ ಸಂಸ್ಕೃತಿ , ದುರುಗ ಮುರುಗಿ ಕಥನ , ಉಪಪಂಗಡ ಮೊಂಡರು, ಪರಿವಾರದವರ ಹಿನ್ನೆಲೆ ಮೂಲ , ಕೇರಳದ ಚೇರರು, ನಾಯರರು ಮತ್ತು ಕರ್ನಾಟಕದ ನಾಯಕರು.
©2024 Book Brahma Private Limited.