ಹಬ್ಬಗಳ ಆಚರಣೆಯಿಂದ ಮನುಷ್ಯ ಚೈತನ್ಯಶೀಲ, ಕ್ರಿಯಾಶೀಲನೂ ಆಗುತ್ತಾನೆ ಎನ್ನುವ ನಂಬಿಕೆ ಇದೆ. ಪ್ರತಿಯೊಂದು ಹಬ್ಬದ ಆಚರಣೆಗೂ ಅದರದ್ದೇ ಆದ ವಿಶಿಷ್ಟ ಸ್ಥಾನವಿದೆ. ಈ ನಿಯಮಿತ ದಿನದಲ್ಲಿಯಾದರೂ ಕಡ್ಡಾಯವಾಗಿ ದೇಹ ದಂಡನೆ ಮೂಲಕ ವ್ರತಾಚರಣೆ ಮಾಡಬೇಕು.
ನಾಡಿನ ವಿವಿಧ ಭಾಗದಲ್ಲಿ ಆಚರಿಸುವ ಹಬ್ಬಗಳು ಭಿನ್ನವಾಗಿರುತ್ತವೆ. ಗುಳ್ಳವ್ವನ ಸಡಗರದ ಹಬ್ಬ, ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆಯ ಸಂಭ್ರಮ, ಸೀಗೀ ಹುಣ್ಣಿಮೆ ಹಬ್ಬ, ಹೋಳಿ ಹಬ್ಬ ಹೀಗೆ ಉತ್ತರ ಕರ್ನಾಟಕದ ವಿವಿಧ ಹಬ್ಬಗಳ ಆಚರಣೆಯ ಮಹತ್ವ ಕುರಿತು ಆರ್.ಬಿ.ಚಿಲಮಿ ಅವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2025 Book Brahma Private Limited.