ಹಕ್ಕಿಪಿಕ್ಕಿ ಸಮುದಾಯ, ಮೂಲತ ಗುಜರಾತ್, ರಾಜಸ್ಥಾನದವರಾಗಿದ್ದು ಆಂಧ್ರ ಪ್ರದೇಶದ ಮೂಲಕ ಕರ್ನಾಟಕ್ಕೆ ವಲಸೆ ಬಂದವರಾಗಿದ್ದಾರೆ. ಹಕ್ಕಿ ಹಿಡಿಯುವುದು ಈ ಸಮುದಾಯದ ಮೂಲ ಕಸುಬಾಗಿದೆ. ರಾಜ ಅಕ್ಬರ್ ಮತ್ತು ಪ್ರತಾಮಸಿಂಹನ ಕದನದ ಕಾರಣವಾಗಿ ತಮ್ಮ ಮೂಲ ನೆಲೆಯನ್ನು ಬಿಟ್ಟು ದಕ್ಷಿಣಕ್ಕೆ ವಲಸೆ ಬಂದ ಇವರು ಆರ್ಥಿಕವಾಗಿ, ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಕುಮುದಾ ಬಿ. ಸುಶೀಲಪ್ಪ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯದವರ ಬದುಕಿನ ಕುರಿತು ಮಾಹಿತಿ ನೀಡುವ ಕೃತಿ-ಹಕ್ಕಿಪಿಕ್ಕಿ. ಇದರಲ್ಲಿ ಹಕ್ಕಿಪಿಕ್ಕಿ ಜನಾಂಗದ ಮೂಲ, ಸ್ಥಳಾವರಣ, ಬಂಧುತ್ವ ಮತ್ತು ವಿವಾಹ, ಆರಾಧನೆ ಆಚರಣೆ ನಂಬಿಕೆ, ಒಳಾಡಳಿತ ವ್ಯವಸ್ಥೆ, ಆರ್ಥಿಕ ಜೀವನ, ಸಾಹಿತ್ಯ ಮತ್ತು ಭಾಷೆ, ಪ್ರದರ್ಶಕ ಕಲೆಗಳು, ಸಮಸ್ಯೆ ಸಂಘಟನೆ ಪರಿಹಾರದ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ.
©2024 Book Brahma Private Limited.