ಕಳೆದ ಒಂದು ಶತಮಾನದಿಂದೀಚೆಗೆ ಮಹಾರಾಷ್ಟ್ರ ಮತ್ತು ತೆಲಂಗಾಣಗಳಿಂದ ಕರ್ನಾಟಕಕ್ಕೆ ವಲಸೆ ಬಂದ ಮಾಂಗ್ ಗಾರುಡಿ ಸಮುದಾಯವು ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿದೆ. ಎಮ್ಮೆ ಕೋಣಗಳ ವ್ಯಾಪಾರ, ಎಮ್ಮೆಯ ಮೈ ಕೂದಲು ಬೋಳಿಸುವುದು, ಕಕ್ಕಸು ಚಾಚುವ, ಚರಂಡಿ ಸ್ಚಚ್ಛ ಮಾಡುವ, ಸೇಂದಿ ಮಾರುವ ಕೆಲಸಗಳನ್ನು ಈ ಸಮದಾಯವು ಉಪ ಕಸುಬಾಗಿ ಮಾಡಿಕೊಂಡಿದೆ. ಸ್ವಂತ ನೆಲೆಯಿಲ್ಲದ ಈ ಸಮುದಾಯವು ಯಾವುದೇ ಕ್ಷಣದಲ್ಲಿ ಎತ್ತಂಗಡಿಯಾಗುವ ಭಯದಲ್ಲಿ ಬದುಕುತ್ತಿದ್ದಾರೆ. ಕನಿಷ್ಠ ಮೂಲ ಸೌಕರ್ಯಗಳು ಕೂಡ ದೊರೆಯದೆ ಕಷ್ಟದಿಂದ ದಿನ ದೂಡುತ್ತಿದ್ದಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಯುವ ಲೇಖಕ ಹರ್ಷಕುಮಾರ್ ಕುಗ್ವೆ ಅವರು ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ, ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2025 Book Brahma Private Limited.