ದಳವಾಯಿ ಎಂದಾಕ್ಷಣ ಸೇನಾಧಿಪತಿ, ಒಂದು ಪ್ರದೇಶದ ನಾಯಕ, ಮುಖ್ಯಸ್ಥ ಹೀಗೆ ಬೇರೆ ಬೇರೆ ಅರ್ಥಗಳು ಮೂಡಿಬರುತ್ತವೆ. ಆದರೆ ’ದಳವಾಯಿ’ ಕೃತಿಯು ಕುರುಬ ಸಮುದಾಯದ ಜೀವಂತ ಬೀರಪ್ಪನನ್ನು ಪರಿಚಯಿಸುತ್ತದೆ.
ದಳವಾಯಿ ಅರ್ಥ ಮತ್ತು ವ್ಯಾಖ್ಯಾನ, ಹಾಲುಮತ ಸಮುದಾಯದ ಇತಿಹಾಸ, ಕುರುಬರ ಕುಲದೈವ ಬೀರಪ್ಪ, ದಳವಾಯಿ ಕಟ್ಟ ಕಟ್ಟುವುದು, ದೀಕ್ಷೆ ಕೊಡುವುದು, ದಳವಾಯಿಯ ಕೌಟುಂಬಿಕ, ಸಾಮಾಜಿಕ ಧಾರ್ಮಿಕ ಜೀವನ ವಿಚಾರಗಳು, ಆಚರಣೆಗಳು, ಕುಣಿತ, ಆಧುನಿಕತೆಯಲ್ಲಿ ದಳವಾಯಿಯ ಸ್ಥಾನ- ಹೀಗೆ ಅನೇಕ ಮಗ್ಗುಲುಗಳಿಂದ ಕುರುಬರ ಜೀವಂತ ಬೀರಪ್ಪನ ಸಾಂಸ್ಕೃತಿಕ ಮಹತ್ವವನ್ನು ಲೇಖಕರು ಈ ಕೃತಿಯ ಮೂಲಕ ತಿಳಿಸಿಕೊಟ್ಟಿದ್ದಾರೆ.
©2024 Book Brahma Private Limited.