ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಪುರಂದರ ಸಾಹಿತ್ಯ ಹಾಗೂ ಬದುಕು ಕುರಿತು ಚಿತ್ರಿಸಿದ ಕೃತಿ-ಪುರಂದರ ಸಾಹಿತ್ಯ ದರ್ಶನ-2. ಹರಿದಾಸರ ಅಧ್ಯಾತ್ಮಿಕ ದೃಷ್ಟಿ, ತಾರತಮ್ಯ ಸ್ತೋತ್ರ,ಗುರುಸ್ತುತಿ, ಗಣಪತಿ, ವಾಯು. ರಮಾ. ಹರಿ ಸೇರಿದಂತೆ ದೇವತಾ ದರ್ಶನ, ಹರಿಸರ್ವೋತ್ತಮ, ಅವತಾರ ವಿಶೇಷ ಸೇರಿದಂತೆ ಮಹಾತ್ಮರ ದರ್ಶನ, ವಿರಕ್ತಿ-ಭಕ್ತಿ ಸೇರಿದಂತೆ ಸಾಧನ-ದರ್ಶನ ಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ. ಪುರಂದರದಾಸರು ಹರಿದಾಸರಾಗುವ ಮುನ್ನ ಅವರ ಆಚಾರ-ವಿಚಾರಗಳೇನು? ನಂಬಿಕೆಗಳೇನು?, ನಿಲುವುಗಳೇನು ಎಂಬುದರ ಜಿಜ್ಞಾಸೆಗೆ ಲೇಖಕರು ಪ್ರಯತ್ನಿಸಿದ್ದಾರೆ. ಹರಿದೀಕ್ಷೆಯ ನಂತರ ಅವರು ಪುರಂದರ ದಾಸರಾಗಿ ಹರಿಯ ಪಥದಲ್ಲಿ ನಡೆದರು ಎಂಬ ನಿಟ್ಟಿನಲ್ಲಿ ಇಲ್ಲಿಯ ಚರ್ಚೆ ಸಾಗಿದೆ.
©2024 Book Brahma Private Limited.