ಡಾ. ಮುಜಾಫರ್ ಅಸ್ಸಾದಿ ಅವರು ಸ್ತ್ರೀವಾದಿತನ ಕುರಿತು ಬರೆದ ವೈವಿಧ್ಯಮಯ ಲೇಖನಗಳ ಸಂಗ್ರಹ ಕೃತಿ-ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ. ಕೃತಿಯ ಸಂಪಾದಕರು ಮಾಧವ್ ಐತಾಳ್. ಕೃತಿಯ ಸಹ ಸಂಪಾದಕರೂ ಆದ ಡಾ. ಆರ್. ಸಂತೋಷನಾಯಕ ಬೆನ್ನುಡಿ ಬರೆದು ‘ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ’ ಕುರಿತು ಸಾಕಷ್ಟು ಸಂಶೋಧನೆ ನಡೆದಿದ್ದು ಪುಸ್ತಕಗಳೂ ಬಂದಿವೆ. ಆದರೆ, ಈ ಕೃತಿಯು ಅಪರೂಪದ್ದು. ಲೇಖಕರ ಕನ್ನಡ ಜ್ಞಾನ ಪರಂಪರೆಗೆ ಈ ಕೃತಿಯು ಪ್ರಮುಖ ಕೊಡುಗೆಯಾಗಿದ್ದು, ಅನೇಕ ಒಳನೋಟಗಳನ್ನು ನೀಡುತ್ತದೆ. ಕರ್ನಾಟಕದಲ್ಲಿ ಸ್ತ್ರೀವಾದ ಬೆಳೆದು ಬಂದ ದಾರಿಯನ್ನು ಗುರುತಿಸುತ್ತಾ ಇನ್ನಷ್ಟು ಚರ್ಚೆಗಳಿಗೆ ದಾರಿ ಮಾಡಿಕೊಡುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
ಭಾರತೀಯ ಸ್ತ್ರೀವಾದದ ಸವಾಲುಗಳು, ಸ್ತ್ರೀವಾದದ ನೆಲೆಗಳು, ಕರ್ನಾಟಕದಲ್ಲಿ ಸ್ತ್ರೀವಾದದ ಬೆಳವಣಿಗೆ : ಕಥನಗಳ ಇತಿಹಾಸ, ಉದಾರವಾದಿ ಸ್ತ್ರೀವಾದ, ಪರಿಸರ ಸ್ತ್ರೀವಾದ, ಗಾಂಧಿಯನ್ ಸ್ತ್ರೀವಾದ, ರೈತಾಪಿ ಮತ್ತು ಜನಪ್ರಿಯ ರೈತಾಪಿ ಸ್ತ್ರೀವಾದ, ಮುಸ್ಲಿಂ /ಇಸ್ಲಾಮಿಕ್ ಸ್ತ್ರೀವಾದ, ದಲಿತ ಸ್ತ್ರೀವಾದ, ಆದಿವಾಸಿ/ಮೂಲನಿವಾಸಿ ಸ್ತ್ರೀವಾದ, ರೈತ ಚಳವಳಿಯಲ್ಲಿ ಮಹಿಳೆ, ಪರಿಸರ ಚಳವಳಿ ಮತ್ತು ಮಹಿಳೆ, ದಲಿತ ಚಳವಳಿ ಮತ್ತು ಮಹಿಳಾ ವಿಷಯ, ಆದಿವಾಸಿ ಹೋರಾಟ ಮತ್ತ ಮಹಿಳೆ ಹಾಗೂ ನಾಗರಿಕ ಸಮಾಜ, ಮಹಿಳಾ ಸಂಘಟನೆಗಳು ಮತ್ತು ಸ್ತ್ರೀವಾದ ಹೀಗೆ ವಿವಿಧ ಅಧ್ಯಾಯಗಳಡಿ ಸ್ತ್ರೀವಾದವನ್ನು ಚರ್ಚಿಸಲಾಗಿದೆ.
©2024 Book Brahma Private Limited.