ಲೇಖಕಿ ಪಿ. ಭಾರತಿ ದೇವಿ ಅವರ ಚಿಂತನೆಯ ಮೂಸೆಯಲ್ಲಿ ಆಕಾರ ಪಡೆದ ಕೃತಿ-ಮಹಿಳೆ ಮತ್ತು ದೇಹ ರಾಜಕಾರಣ.ಸಮಾಜ-ಸಂಸ್ಕೃತಿ, ವಿಧಿ ನಿಷೇಧಗಳ ಮಧ್ಯೆ ತನ್ನತನವನ್ನು ಕಂಡುಕೊಳ್ಳುವ ಹಾದಿಯಲ್ಲಿ ಹೆಣ್ಣು ಪ್ರತಿನಿತ್ಯ ಅಗ್ನಿದಿವ್ಯವನ್ನು ಎದುರಿಸಬೇಕಾಗುತ್ತದೆ. ತನ್ನ ಇಚ್ಛೆಯ ಬಟ್ಟೆ, ತನ್ನಿಚ್ಛೆಯ ಆಹಾರ, ತನ್ನಿಚ್ಛೆಯ ಸಂಗಾತಿ ಹೀಗೆ ಪ್ರತಿಯೊಂದನ್ನೂ ಹೋರಾಟದ ಭಾಗವಾಗಿಯೇ ಅವಳು ದಕ್ಕಿಸಿಕೊಳ್ಳಬೇಕು. ತನ್ನ ವೈಶಿಷ್ಟ್ಯವನ್ನು ಒಪ್ಪಿಕೊಳ್ಳುವುದು, ತನ್ನತನದ ಹುಡುಕಾಟ ಮತ್ತು ಪ್ರತಿರೋಧ ಇವೆರಡೂ ಜೊತೆಜೊತೆಗೆ ಸಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಈ ಕೃತಿಯು ಮಹಿಳಾ ಅಸ್ಮಿತೆಯನ್ನು ಕಟ್ಟಿಕೊಡುವ ಕೃತಿಯಾಗಿದೆ.
©2024 Book Brahma Private Limited.