ಪ್ರಸಿದ್ಧ ಸ್ತ್ರೀವಾದಿಗಳ ಸಂಕ್ಷಿಪ್ತ ಪರಿಚಯ

Author : ಡಾ. ಶ್ರೀದೇವಿ ಎಲ್ ರಾಠೋಡ

Pages 108

₹ 130.00




Year of Publication: 2022
Published by: ಸೊಡರು ಪ್ರಕಾಶನ ಮೈಸೂರು
Address: # 285/ಎಫ್ 5, ಉತ್ತರಾದಿಮಠ ರಸ್ತೆ, 5ನೇ ಪಶ್ಚಿಮ ಅಡ್ಡರಸ್ತೆ, ಮೈಸೂರು

Synopsys

ಸ್ತ್ರೀವಾದಿ ಚಳುವಳಿ ಅನೇಕ ಕಷ್ಟನಷ್ಟಗಳ ಮಧ್ಯೆ ಬೆಳೆದು ಬಂದಂತಹ ಒಂದು ಸಂಘರ್ಷ. ಮಹಿಳೆ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಪುರುಷನ ಅಧೀನದಲ್ಲಿ ನಡೆದು ಬಂದದ್ದು ಇತಿಹಾಸದುದ್ದಕ್ಕೂ ಇದೆ. ಇತಿಹಾಸದಲ್ಲಿ ಮಹಿಳೆ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾಳೆ ಮತ್ತು ಇಂದಿಗೂ ಮಾಡುತ್ತಿದ್ದಾಳೆ. ಹೀಗೆ ಮಹಿಳಾ ಅಸ್ತಿತ್ವದ ಹೋರಾಟಕ್ಕೆ ಸ್ತ್ರೀವಾದ ಎಂದು ಕರೆಯುವುದು ಸಮಾಜದಲ್ಲಿ ರೂಢಿಯಲ್ಲಿದೆ. ಪಾಶ್ಚಾತ್ಯ ಸ್ತ್ರೀವಾದ ನೋಡಿದಾಗ ಮೊದಲು 17ನೇ ಶತಮಾನದಲ್ಲಿ ಬೆಳೆದು ಬಂದಿರುವುದು ಒಂದಾದರೆ, ಪಾಶ್ಚಾತ್ಯ ಸ್ತ್ರೀವಾದಿಯರಲ್ಲಿ ಮೇರಿ ವೋಲ್ಸ್ಟೋನ್ಕ್ರಾಫ್ಟ್ ಮೊದಲ ಸ್ತ್ರೀವಾದಿ ಎಂದು ಗುರುತಿಸಲಾಗುತ್ತದೆ. ಭಾರತದಲ್ಲಿ ಸಾವಿತ್ರಿಬಾಯಿಪುಲೆ ರಮಾಬಾಯಿ, ರಾನಡೆ ಸರೋಜಿನಿ ನಾಯ್ಡು, ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಮಾನತೆಗಾಗಿ ಹೋರಾಡಿದ ವೀರ ಮಹಿಳೆಯರು ಎಂದು ಕರೆಸಿಕೊಳ್ಳುತ್ತಾರೆ. ಹೀಗೆ ಲಿಂಗ ಸಮಾನತೆ ತರುವುದಕ್ಕೆ ಅನೇಕ ಹೋರಾಟದ ಮೂಲಕ ಸ್ತ್ರೀವಾದ ಚಳುವಳಿ ಬೆಳೆದು ಬಂದಿದೆ. ಈ ಚಳುವಳಿಯಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಸ್ತ್ರೀವಾದಿಯರ ಪರಿಚಯ ನಮಗೆ ಸಿಗುತ್ತದೆ. ಹೀಗಾಗಿ "ಪ್ರಸಿದ್ಧ ಸ್ತ್ರೀವಾದಿಗಳ ಸಂಕ್ಷಿಪ್ತ ಪರಿಚಯ" ಪುಸ್ತಕದಲ್ಲಿ ಅವರ ಬದುಕಿನ ಸಂಕ್ಷಿಪ್ತ ಪರಿಚಯ, ಸಿದ್ಧಾಂತ, ಮತ್ತು ಕೃತಿಯ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿರುವ ಪ್ರಯತ್ನ ಮಾಡಲಾಗಿದೆ.

Related Books