ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯ ಸಂಪುಟಗಳ ಮಾಲಿಕೆಯಡಿ ಪ್ರಕಟಿಸಿದ ಕೃತಿ-ಸ್ತ್ರೀವಾದಿ ಚಿಂತನೆ. ಡಾ. ಮಲ್ಲಿಕಾ ಘಂಟಿ ಅವರು ಸಂಪಾದಕರು. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ (ತೇಜಸ್ವಿನಿ ನಿರಂಜನ, ಸೀಮಂತಿನಿ ನಿರಂಜನ), ಸ್ತ್ರೀವಾದ ಮತ್ತು ಸ್ತ್ರೀವಾದಿ ವಿಮರ್ಶೆ (ಡಾ. ವಿಜಯಾ ದಬ್ಬೆ), ಸ್ತ್ರೀವಾದ ಮತ್ತು ಸ್ತ್ರೀವಾದಿ ವಿಮರ್ಶೆ: ಒಂದು ಸಮಾಲೋಚನೆ (ಡಾ. ಸರೋಜಿನಿ ಶಿಂತ್ರಿ, ಸ್ತ್ರೀವಾದ: ಜ್ಞಾನಮೀಮಾಂಸೆಯಿಂದ ಲೋಕಮೀಮಾಂಸೆಯ ಕಡೆಗೆ (ಡಾ. ಎಂ.ಎಸ್. ಆಶಾದೇವಿ, ಸ್ತ್ರೀವಾದದ ಮೊದಲ ಚಿಂತಕಿಯರು (ಡಾ. ಬಿ.ಎನ್. ಸುಮಿತ್ರಾಬಾಯಿ), ಸಮಕಾಲೀನ ಕನ್ನಡ ಸಾಹಿತ್ಯ: ಸ್ತ್ರೀವಾದಿ ಓದಿನ ಹಿನ್ನೆಲೆಯಲ್ಲಿ (ಡಾ. ಎಚ್.ಎಸ್. ಶ್ರೀಮತಿ), ಸ್ತ್ರೀವದದ ಅರ್ಥ ಮತ್ತು ವ್ಯಾಪ್ತಿ (ಡಾ. ಪ್ರೀತಿ ಶುಭಚಂದ್ರ), ಮಾರ್ಕ್ಸ್‌ವಾದ ಮತ್ತು ಸ್ತ್ರೀವಾದಿ ವಿಮರ್ಶೆ (ಆರ್. ತಾರಿಣಿ ಶುಭದಾಯಿನಿ), ಬಾರತೀಯ ಸತ್ರೀವಾದದ ತಾತ್ವಿಕತೆ (ಡಾ. ಗಾಯತ್ರಿ ನಾವಡ), ಅಮೃತಮತಿ: ಸ್ತ್ರೀವಾದಿ ನೆಲೆಯಲ್ಲಿ (ಡಾ. ಕಮಲಾ ಹಂಪನಾ), ಶಾಸನಗಳಲ್ಲಿ ಸ್ತ್ರೀ ಸ್ಥಾನಮಾನ ಮತ್ತು ಸಾಂಆಜಿಕ ಸಂಬಂಧ (ಡಾ. ಚನ್ನಕ್ಕ ಪಾವಟೆ, ಹೆರೂರು: ಹೆಣ್ಣಿ ರಗಳೆ ಸ್ತ್ರೀವಾದಿ ಓದು (ಡಾ. ಮೈತ್ರೇಯಣಿ ಗದಿಗೆಪ್ಪಗೌಡರ) ಹೀಗೆ ಒಟ್ಟು 26 ಲೇಖಕಿಯರ ,26 ಚಿಂತನಾ ಬರಹಗಳನ್ನು ಸಂಕಲಿಸಿದೆ.
ಕೃತಿಯ ಕುರಿತು ಪ್ರಧಾನ ಸಂಪಾದಕ ನಾಡೋಜ ಡಾ. ಮನು ಬಳಿಗಾರ ‘ಕನ್ನಡ ಲೇಖಕಿಯರ ಅನುಭವ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಈ ಮಹಿಳಾ ಸಂಪುಟವು ಹಿಡಿದು ಇಟ್ಟಿದೆ. ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟವು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.