ಸ್ತ್ರೀಪರ

Author : ಹಾಲತಿ ಸೋಮಶೇಖರ್‌

Pages 218

₹ 150.00




Year of Publication: 2008
Published by: ವಿಸ್ಮಯ ಪ್ರಕಾಶನ
Address: ಮೌನ, ಎಲ್- 7, 1ನೇ ಕ್ರಾಸ್, ಕುವೆಂಪುನಗರ, ಮೈಸೂರು- 570023
Phone: 9449972117

Synopsys

ಲೇಖಕ ಡಾ. ಹಾಲತಿ ಸೋಮಶೇಖರ್‌ ಅವರ ಲೇಖನ ಕೃತಿ ʼಸ್ತ್ರೀ ಪರʼ. ಲೇಖಕ ಡಾ. ಎಚ್. ಎನ್. ಮಂಜುರಾಜ್ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಡಾ. ಹಾಲತಿ ಸೋಮಶೇಖರ್, ಸ್ನೇಹೋತ್ಸಾಹಗಳ ಕೈಂಕರ್ಯವನ್ನೇ ಉಸಿರಾಡುವ, ಉಸಿರಿನ ಪ್ರತಿ ಲಯದಲ್ಲೂ ಜೀವಪ್ರೀತಿ ತೋರುವ ಕವಿಹೃದಯಿ. ಮಾನವಂತ- ಮಾನವೀಯ ಚಿಂತಕ; ಪ್ರಗತಿಪರ ಲೇಖಕ. ಶಿಕ್ಷಣ- ಪತ್ರಿಕೆ- ಆಡಳಿತ- ಸಂಘಟಿತ ಹೋರಾಟಗಳೇ ಮೊದಲಾದ ಸಾಮೂಹಿಕ ಸಾಧ್ಯತೆಗಳ ಮೂಲಕ ಸಾಹಿತ್ಯ- ಸಂಸ್ಕ್ರತಿಯ ನೆಲೆ-ಬೆಲೆಗಳನ್ನು ಅರ್ಥೈಸುತ್ತಿರುವ ಗುಣಗ್ರಾಹೀ ಪಂಡಿತ. ಹತ್ತು ಹಲವು ಹೊತ್ತಗೆಗಳನ್ನು ಈಗಾಗಲೇ ಪ್ರಕಟಿಸಿರುವ ಇವರು ಸಾಮಾಜಿಕ ಮತ್ತು ಸಾಂಸ್ಕ್ರತಿಕ ಹಿನ್ನೆಲೆಗಳಲ್ಲಿ ಮಹಿಳಾ ಚಳುವಳಿ ರೂಪುಗೊಂಡ ಗುರಿದಾರಿಗಳನ್ನು ಗುರುತರವಾಗಿ ಗುರುತಿಸಿಕೊಟ್ಟರು. ಇದೀಗ ಅದೇ ಮಾರ್ಗದಲ್ಲಿ ಇನ್ನಷ್ಟು ಶ್ರಮಿಸಿದ್ದಾರೆ. ನಿಜಾರ್ಥದಲ್ಲಿ ಸ್ತ್ರೀ ಪರವಾಗಿದ್ದಾರೆ” ಎಂದು ಹೇಳಿದ್ದಾರೆ.

About the Author

ಹಾಲತಿ ಸೋಮಶೇಖರ್‌
(25 February 1963)

ಖ್ಯಾತ ಕತೆಗಾರ-ಪತ್ರಕರ್ತ ಪಿ. ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವ ಡಾ. ಹಾಲತಿ ಸೋಮಶೇಖರ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಲತಿಯವರು. 1963ರ ಫೆಬ್ರುವರಿ 25ರಂದು ಜನಿಸಿದ ಅವರು ಎಂ.ಎ., ಪಿಎಚ್.ಡಿ., ಎಂ.ಎಡ್. ಮಾಡಿ ಶಿಕ್ಷಣಾಧಿಕಾರಿ ಆಗಿದ್ದಾರೆ. ಪಿ. ಲಂಕೇಶ, ಮಹಿಳಾ ಚಳವಳಿ, ಸ್ತ್ರೀಪರ, ಓದುವ ಸುಖ, ಸಾಯೋಆಟ-ವಿಮರ್ಶೆ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು. ಪಿ. ಲಂಕೇಶ ಸಾಹಿತ್ಯ  ಅವರ ಪಿಎಚ್.ಡಿ. ಮಹಾಪ್ರಬಂಧ. ...

READ MORE

Related Books