ಲೇಖಕಿ ವಿದ್ಯಾ ರೆಡ್ಡಿ ಅವರ ’ಮಂಜು ಮುಸುಕಿದ ಹಾಡು’ ಅಂಜೂರ ಪ್ರಶಸ್ತಿ ಪಡೆದ ಕಾದಂಬರಿಯಾಗಿದೆ. ಜೀವಪರ ನಿಲುವಿನ ದನಿ ಹಾಗೂ ಸಂಕೇತಗಳು ಎದ್ದು ಕಾಣುತ್ತವೆ. ಕಾದಂಬರಿಗೆ ಮುನ್ನುಡಿ ಬರೆದಿರುವ ಲೇಖಕ ಪ್ರೊ. ಸಂಗಮೇಶ ಗುಜಗೊಂಡ ಅವರು, ‘ಸುಂದರ ಬದುಕಿನ ಹಂಬಲ ಮಿಂಚಿನ ಗೋಚಲಾಗಿ ಕಾಣುತ್ತವೆ. ವಸ್ತುವು ತುಂಬಾ ಭರವಸೆಯನ್ನು ಮೂಡಿಸಿದ್ದು,ಸ್ತ್ರೀ ಶೋಷಣೆಯ ಸುತ್ತ ಕತೆಯನ್ನು ಹೆಣೆದುಕೊಂಡಿದೆ. ವಸ್ತುವನ್ನು ಸುಂದರವಾಗಿ ವಿನ್ಯಾಸಗೊಳಿಸಿ, ಓದುಗರಿಗೆ ಮುದ ನೀಡುವಂತೆ ಲೇಖಕಿಯ ಬರವಣಿಗೆಯಿದೆ. ಅವರು ಮೊದಲ ಹೆಜ್ಜೆಯಲ್ಲಿ ಯಶದ ಗುರುತನ್ನು ಮೂಡಿಸಿದ್ದಾರೆ. ಇಲ್ಲಿ ಕಾವ್ಯ, ಗದ್ಯ ಎರಡರಲ್ಲಿಯೂ ಸೃಜನ ಲವಲವಿಕೆಯನ್ನು ಕಾಣಬಹುದು. ಯಾವುದೇ ಬರವಣಿಗೆಗೆ ಚಿಂತನ ಮಂಥನಗಳು ಮೂಲವಾಗಿದ್ದು-ಬೇರು, ಭಾಷೆ -ಬರವಣಿಗೆಗೆ ಆಪ್ತವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.