ಲೇಖಕ ಗಂಗಾರಾಂ ಚಾಂಡಾಳ ಅವರ ಕೃತಿ-ಮಹಿಳಾ. ಸ್ತ್ರೀವಾದಿ ನೆಲೆಯಲ್ಲಿ ಪ್ರತಿಪಾದಿಸಿದ ಲೇಖನಗಳ ಸಂಗ್ರಹ ಕೃತಿ ಇದು. ಒಂದೆಡೆ ಮಹಿಳೆಯರ ಕಾನೂನಿನ ಬೆಂಬಲ ಕುರಿತು ಮಹಿಳೆಯರಿಗೆ ತಿಳಿದಿಲ್ಲ. ಮತ್ತೊಂದೆಡೆ-ಹೆಣ್ಣು-ಹೆಣ್ಣನ್ನೇ ಶೋಷಿಸುವ ವ್ಯವಸ್ಥೆ ಇದೆ. ಮಗದೊಂದು ಕಡೆ-ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳುತ್ತಾ ಪುರುಷರನ್ನು ಮುಲೆಗುಂಪಾಗಿಸಬಾರದು ಎಂಬ ಪುರುಷ ಪ್ರಧಾನ ಮನೋಭಾವ. ಇನ್ನೊಂದು ಕಡೆ-ಹೆಣ್ಣೆ ಹೆಣ್ಣಾಗಿಯೇ ಇರಬೇಕು ಎಂಬ ಮಹಿಳಾ ಸಮೂಹದಲ್ಲೇ ಅಪಸ್ವರ ಇಂತಹ ಗೊಂದಲದಿಂದಾಗಿ ಮಹಿಳೆಯರಲ್ಲಿ ಐಕ್ಯತೆ ಬರುತ್ತಿಲ್ಲ. ಇದರ ಲಾಭ ಪುರುಷ ಪ್ರಧಾನ ಸಮಾಜ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ಮಹಿಳೆಯರು ಎಲ್ಲಿಯವರೆಗೆ ತಮ್ಮ ಹಕ್ಕುಗಳು ಕೇಳುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರ ಮೇಲೆ ಶೋಷಣೆ ಆಗುತ್ತಿರುತ್ತದೆ ಎಂಬ ಎಚ್ಚರ ನೀಡುವ ಬರಹಗಳು ಇಲ್ಲಿ ಸಂಕಲನಗೊಂಡಿವೆ.
©2025 Book Brahma Private Limited.