ಲೇಖಕ ಜಾಜಿ ದೇವೇಂದ್ರಪ್ಪ ಅವರ ಅನುವಾದಿತ ಲೇಖನ ಸಂಗ್ರಹ ಕೃತಿ ʻಸೋಷಿಯಲ್ ಸೈಂಟಿಸ್ಟ್ ಸಾವಿತ್ರಿಬಾಯಿʼ. ತೆಲುಗಿನ ಸಂಗಿಶೆಟ್ಟಿ ಶ್ರೀನಿವಾಸ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಮಾಡಲಾಗಿದೆ. ಪುಸ್ತಕದಲ್ಲಿ ಭಾರತದ ಮೊಟ್ಟಮೊದಲ ಶಿಕ್ಷಕಿ, ಸಮಾಜಿಕ ಹೋರಾಟಗಾರ್ತಿಯಾದ ಸಾವಿತ್ರಿ ಬಾಯಿ ಅವರ ಕುರಿತಾದ ಹಲವು ವಿಚಾರಗಳ ಕುರಿತು ಹೇಳುತ್ತಾ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದ್ಧಾರೆ. ಭಾರತದ ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ದುಡಿದ, ಸಮಾಜದಲ್ಲಿ ಬೇರೂರಿದ್ದ ಇತರ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ವಿರುದ್ದ ದನಿ ಎತ್ತಿ ಮಹಿಳೆಯರ ಸಮಾನತೆಯ ಹಕ್ಕಿಗೆ ಹೋರಾಡಿದ ಧೀರ ವನಿತೆ ಸಾವಿತ್ರಿ ಬಾಯಿ ಅವರು. ಜೊತೆಗೆ ಲೇಖಕಿಯಾಗಿಯೂ ಗುರುತಿಸಿಕೊಂಡವರು. ಬಾಲ್ಯವಿವಾಹಕ್ಕೆ ಒಳಗಾಗಿ ಮುಂದೆ ಪತಿ ಜ್ಯೋತಿಬಾಫುಲೆ ಅವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದೊಂದಿಗೆ ಬೆಳೆದು ಬಂದ ಸಾವಿತ್ರಿ ಅವರ ಕುರಿತಾದ ಲೇಖನಗಳನ್ನು ಇಲ್ಲಿ ಜಾಜಿ ದೇವೇಂದ್ರಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.