'ಮಹಿಳಾ ಸಾಹಿತ್ಯ ಸಮಸ್ಯೆ ಮತ್ತು ಸವಾಲುಗಳು' ಪ್ರೇಮಾಂಜಲಿ ಅವರ ವಿಮರ್ಶಾ ಕೃತಿ. ಇಲ್ಲಿ 11 ಲೇಖನಗಳಿವೆ. ಕಾವ್ಯದ ಆಶಯ, ಸ್ತ್ರೀ ಸಂವೇದನೆ, ದಲಿತ ಬಂಡಾಯ, ಪ್ರತಿಭಟನೆಯ ನೆಲೆಗಳು ವಿಶೇಷವಾಗಿ ಡಾ. ಜಯದೇವಿ ಗಾಯಕವಾಡ, ರಜಿಯಾ, ರೂಪ ಅವರ ವಿಮರ್ಶಾ ಲೇಖನಗಳೂ ಒಳಗೊಂಡು ಮಹಿಳೆಯರ ವಿರುದ್ಧ ದೌರ್ಜನ್ಯ ಹಾಗೂ ಗ್ರಾಮೀಣ ಹೆಣ್ಣು ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣ ಲೇಖನಗಳಿವೆ. ಮಹಿಳೆಯರ ಸಮಸ್ಯೆ-ಸವಾಲುಗಳ ಕುರಿತು ಚಿಂತನೆಗೆ ಹಚ್ಚುತ್ತವೆ. ವಚನಕಾರ್ತಿಯರ ಅನುಭವ ಅನುಭಾವವಾಗಿರುವುದನ್ನು ಲೇಖಕರು ಗುರುತಿಸಿ ಬರೆದಿದ್ದಾರೆ. ಹಿರೇಮಠರ ’ಹವನ’ ಹಾಗೂ ಗೋವಿಂದ ದಾಸರ ’ಕಾವ್ಯ ’ ಕುರಿತು ಎರಡು ಲೇಖನಗಳಿವೆ.
©2025 Book Brahma Private Limited.