ಸ್ತ್ರೀವಾದದ ಪ್ರಸ್ತುತತೆ

Author : ಎಸ್. ವಿ. ಪ್ರಭಾವತಿ

Pages 98

₹ 60.00




Published by: ಎಸ್‌.ವಿ.ಪ್ರಭಾವತಿ
Address: ಬೆಂಗಳೂರು

Synopsys

‘ಸ್ತ್ರೀವಾದದ ಪ್ರಸ್ತುತತೆ’ ಎಸ್. ವಿ. ಪ್ರಭಾವತಿ ಲೇಖನಗಳ ಸಂಗ್ರಹವಾಗಿದೆ. ವಿದೇಶದಿಂದ ಆಮದಾದದ್ದು ಎಂಬ ಹಣೆಪಟ್ಟಿಯೊಂದಿಗೆ ಆರಂಭವಾದ ಭಾರತದ ಸ್ತ್ರೀವಾದಿ ಚಳವಳಿ ಇಂದು ಯಾರ ಹಂಗೂ ಇಲ್ಲದೆ ಈ ಮಣ್ಣಲ್ಲಿ ಗಟ್ಟಿಯಾಗಿ ತನ್ನ ನೆಲೆಯನ್ನು ಭದ್ರಪಡಿಸತೊಡಗಿದೆ. ಇಲ್ಲಿನ ಹೆಚ್ಚಿನ ಲೇಖನಗಳು ಇದನ್ನು ಸಮರ್ಥಿಸಿವೆ. ಇಂದು ಆಕೆ ಯಾವ ಘಟ್ಟದಲ್ಲಿದ್ದಾಳೆಂದು ಪುರಾಣೇತಿಹಾಸ ಪಾತ್ರಚಿತ್ರಣದಿಂದ ಊಹಿಸಬಹುದು. ಆಧುನಿಕ ಲೇಖಕಿಯರು ಸೃಷ್ಟಿಸಿದ ಮಹಿಳಾ ಪಾತ್ರಗಳು ತಮ್ಮ ಆಶೋತ್ತರಗಳೇನು, ಎಂಬುದನ್ನು ಸ್ಪಷ್ಟಪಡಿಸಿವೆ.

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books