ಲೇಖಕಿ ಉಮಾ ಚಕ್ರವರ್ತಿ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ‘ಜಾತಿ-ಲಿಂಗತ್ವದ ಒಳನೇಯ್ಗೆ: ಒಂದು ಸ್ತ್ರೀವಾದಿ ನೋಟ’ ಶೀರ್ಷಿಕೆಯಡಿ ವಿವಿಧ ಲೇಖಕಿಯರು ಜೊತೆಗೂಡಿ ಕನ್ನಡಕ್ಕೆ ಅನುವಾದಿಸಿದ ಬರಹಗಳನ್ನು ಲೇಖಕಿಯರಾದ ಆರ್. ಪೂರ್ಣಿಮಾ ಹಾಗೂ ಎನ್. ಗಾಯತ್ರಿ ಅವರು ಸಂಯೋಜಿಸಿದ್ದಾರೆ. ಭಾರತೀಯ ಸಾಮಾಜಿಕ ವಲಯದಲ್ಲಿ ಸ್ತ್ರೀವಾದಿ ಚಿಂತನೆ ಹಾಗೂ ಅಧ್ಯಯನಕ್ಕೆ ವೈವಿಧ್ಯಮಯ ಆಯಾಮಗಳನ್ನು ನೀಡುವ ಇಲ್ಲಿಯ ವಿಚಾರಗಳು ಸಾಂಪ್ರದಾಯಿಕತೆಯನ್ನು ಪ್ರಶ್ನಿಸುತ್ತವೆ. ಅವುಗಳ ಪುನರ್ ಪರಿಶೀಲನೆಗೆ ಒತ್ತಾಯಿಸುತ್ತವೆ.
ಕೃತಿಗೆ ಬೆನ್ನುಡಿ ಬರೆದ ಸ್ತ್ರೀವಾದಿ ಚಿಂತಕಿ ಡಾ. ಮೈತ್ರೇಯಿ ಕೃಷ್ಣರಾಜ್ ‘ಜಾತಿ ಹಾಗೂ ಲಿಂಗತ್ವವನ್ನು ಮುಖಾಮುಖಿಯಾಗಿಸುವ ಮೊತ್ತ ಮೊದಲು ಪ್ರಯತ್ನವೇ ಈ ಕೃತಿ. ಚಾರಿತ್ರಿಕ ಮೂಲಗಳನ್ನು, ಧಾರ್ಮಿಕ ಪಠ್ಯಗಳನ್ನು, ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರದ ಸಾಹಿತ್ಯವನ್ನುಗೂರಾಡಿ ಜಾತಿಯ ರೂಪುಗೊಳ್ಳುವಿಕೆಯಲ್ಲಿ ಲಿಂಗತ್ವವು ಹೇಗೆ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಲೇಖಕಿ ತೋರಿಸಿದ್ದಾರೆ. ಇದು ಬೆರಗುಗೊಳಿಸುವ ಅಂತರ್ ಶಿಸ್ತೀಯ ಅಧ್ಯಯನವಾಗಿದೆ. ಚಾರಿತ್ರಿಕ ವಿಸ್ತಾರ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಜಾತಿ ಮತ್ತು ಲಿಂಗತ್ವದ ನಡುವೆ ಇರುವ ಸಂಬಂಧದ ಅದ್ಭುತ ವಿವರಣೆಯೂ ಈ ಕೃತಿಯಲ್ಲಿದೆ. ವಿವಿಧ ಪ್ರದೇಶಗಳು ಹಾಗೂ ಸಾಮಾಜಿಕ ಸಮೂಹಗಳಲ್ಲಿ, ಜಾತಿ ಸ್ವರೂಪಗಳಲ್ಲಿ ಅಡಗಿರುವ ಪರಿವರ್ತನೆಗಳನ್ನು ಗಮನಿಸಲು ನೆರವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.