‘ಸ್ತ್ರೀವಾದ ಮತ್ತು ಲೈಂಗಿಕವಾದ’ ಕೃತಿಯು ಎಚ್.ಎಸ್. ಶ್ರೀಮತಿ ಅವರ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಸ್ರೀವಾದ ಮತ್ತು ಲೈಂಗಿಕವಾದಗಳು ಹೇಗೆ ಹುಟ್ಟಿದವು ಮತ್ತು ಪುರುಷ ಪ್ರದಾನ ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನವನ್ನು ಹೇಳುವ ಪ್ರಯತ್ನವನ್ನು ಲೇಖಕಿ ಈ ಕೃತಿಯಲ್ಲಿ ಮಾಡಿದ್ದಾರೆ. ಲೈಂಗಿಕವಾದದ ಕುರಿತು ವಿವರಿಸುತ್ತಾ ಲೇಖಕಿ, ಲೈಂಗಿಕತೆ ಎನ್ನುವುದು ಸಮಾಜದ ಚರಿತ್ರೆಯನ್ನಷ್ಟೇ ಹಳೆಯದು. ಈ ದಮನದ ಬಗೆಯು ಕಾಲಕಳೆದಂತೆ ಇನ್ನಷ್ಟು ವ್ಯಾಪಕವಾಗಿ, ವೈವಿಧ್ಯಮಯವಾಗಿ ಹೊಸ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳತೊಡಗಿದೆ ಎಂದು ಲೇಖಕಿ ಮರುಗುವುದನ್ನು ಈ ಕೃತಿಯ ಮುಖೇನ ಕಾಣಬಹುದು.
©2024 Book Brahma Private Limited.