ಎಲ್ಲರಿಗಾಗಿ ಸ್ತ್ರೀವಾದ

Author : ಎಚ್.ಎಸ್. ಶ್ರೀಮತಿ

Pages 208

₹ 135.00




Year of Publication: 2020
Published by: ಆಕೃತಿ ಪ್ರಕಾಶನ
Address: ರಾಜಾಜಿನಗರ, ಬೆಂಗಳೂರು

Synopsys

ಲೇಖಕ ಬೆಲ್ ಹುಕ್ಸ್ ಅವರು ಕೃತಿಯನ್ನು ಲೇಖಕಿ ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿರುವ ಪುಸ್ತಕ-ಎಲ್ಲರಿಗಾಗಿ ಸ್ತ್ರೀವಾದ. ಸ್ತ್ರೀವಾದ ಎನ್ನುವುದು ಪುರುಷರ ವಿರುದ್ಧ ಹೋರಾಟವಲ್ಲ. ಪುರುಷತು ಸ್ತ್ರೀಯರ ವಿರುದ್ಧ ನಡೆಸುವ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ಎತ್ತುವ ಧ್ವನಿಯಾಗಿದೆ. ದೈಹಿಕವಾಗಿ ಸ್ತ್ರೀಯರು ಪುರುಷರಿಗಿಂತ ಭಿನ್ನ ಅಥವಾ ಸೂಕ್ಷ್ಮ ಎಂಬ ಕಾರಣಕ್ಕೆ ಅವರನ್ನು ಹತ್ತಿಕ್ಕುವ ಶತಶತಮಾನಗಳ ಪ್ರಯತ್ನದ ವಿರುದ್ಧ ಪ್ರತಿಭಟನೆ-ಆಕ್ರೋಶವಾಗಿದೆ. ಇಂತಹ ವೈಚಾರಿಕ ಬರೆಹಗಳನ್ನು ಒಳಗೊಂಡ ಮೂಲ ಕೃತಿಯನ್ನು ಲೇಖಕಿ ಶ್ರೀಮತಿ ಎಚ್. ಎಸ್. ಅವರು ಸರಳವಾಗಿ ಅನುವಾದಿಸಿದ್ದೇ ಈ ಕೃತಿ.

About the Author

ಎಚ್.ಎಸ್. ಶ್ರೀಮತಿ
(25 February 1950)

ಸ್ತ್ರೀವಾದಿ ಲೇಖಕಿ, ಚಿಂತಕಿ ಎಚ್.ಎಸ್.ಶ್ರೀಮತಿ ಅವರು ಜನಿಸಿದ್ದು 1950 ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ. ತಂದೆ ಎಚ್.ಕೆ.ಸೂರ್ಯನಾರಾಯಣ ಶಾಸ್ತ್ರಿ, ತಾಯಿ ಲಲಿತ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ.  ಇವರು ಅನುವಾದಿಸಿರುವ ಪ್ರಮುಖ ಕೃತಿಗಳೆಂದರೆ ಸೆಕೆಂಡ್ ಸೆಕ್ಸ್‌, ಆಧುನಿಕ ಭಾರತದಲ್ಲಿ ಮಹಿಳೆ, ಬೇಟೆ, ತಾಯಿ, ರುಡಾಲಿ, ದೋಪ್ದಿ ಮತ್ತು ಇತರ ಕಥೆಗಳು, ವೇದಗಳಲ್ಲಿ ಏನಿದೆ, ಪ್ರಾಚೀನ ಭಾರತದ ಚರಿತ್ರೆ ಮುಂತಾದವು. ಮಹಾಶ್ವೇತಾದೇವಿಯವರ ಕುರಿತು ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇವರು ಸಂಪಾದನೆ ಮಾಡಿರುವ ಕೃತಿಗಳೆಂದರೆ ಕನ್ನಡ ...

READ MORE

Related Books