ಕರ್ನಾಟಕ ಮಾತಂಗಿ ಸಂಸ್ಕೃತಿ

Author : ಶಿವಾನಂದ ಕೆಳಗಿನಮನಿ

Pages 556

₹ 500.00




Year of Publication: 2018
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಮುಖ್ಯರಸ್ತೆ, ಅಗ್ರಹಾರದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560079

Synopsys

‘ಕರ್ನಾಟಕ ಮಾತಂಗಿ ಸಂಸ್ಕೃತಿ’ ಲೇಖಕ ಶಿವಾನಂದ ಕೆಳಗಿನಮನಿ ಅವರ ಸಂಶೋಧನಾತ್ಮಕ ಕೃತಿ. ಕರ್ನಾಟಕದಲ್ಲಿ ಮಾತಂಗಿ ಸಂಸ್ಕೃತಿ ಹಲವು ಸಮುದಾಯಗಳ ಮತ್ತು ಸ್ಥಳೀಯ ಕಾರಣಗಳಿಂದ ಶಕ್ತಿ ದೈವವಾಗಿ ಆರಾಧನೆಗೊಳ್ಳುತ್ತಿರುವುದುಂಟು. ಇದಕ್ಕೆ ಭಕ್ತಿಯ ಆಯಾಮವಷ್ಟೆ ಇರುವುದಿಲ್ಲ. ಜೊತೆಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಈ ಮಾತಂಗಿ ದೈವಾರಾಧನೆಯು ಕೆಲವು ಸಮುದಾಯಗಳ ಜೀವನಾವರ್ತದಲ್ಲಿ ಸೇರಿಹೋಗಿದೆ. ಮಾತಂಗಿ ಒಕ್ಕಲುಗಳಾದ ಮಾದಿಗ, ಹೊಲೆಯ, ಅಸಾದಿ ಮುಂತಾದ ಸಮುದಾಯಗಳು ಮತ್ತೆ ಕೆಲವು ಕುಲಕಸುಬುಗಳ ಪರಂಪರೆ ಹೊಂದಿರುವ ಈ ಸಮುದಾಯದ ಗಲ್ಲೆಬಾನಿ, ಮಾತಂಗಿಕಟ್ಟೆ, ಮಾತಂಗಿಪಾದ, ಜೋಗುಳಾಂಬ, ಲಜ್ಜಾಗೌರಿ, ಉಚ್ಚಿಷ್ಟ, ಚಾಂಡಾಲಿನಿ, ಫಲವಂತಿಕೆದೈವ, ಶಾಕ್ತತಂತ್ರಯೋಗ, ಹೀಗೆ ಆದಿಮ ಸಂಸ್ಕೃತಿ ಸೃಷ್ಟಿಸಿರುವ ಈ ಕುಶಲಕರ್ಮಿಗಳಾದ ಚಮ್ಮಾರರು, ಮಾದಿಗರು, ಹೊಲೆಯರು, ಅಸಾದಿಗಳು, ನೇಕಾರರು, ಕಮ್ಮಾರರು, ಬಡಿಗೇರರು, ಗೊಂದಲಿಗರು, ರೈತಾಪಿ, ಬುಡಕಟ್ಟು ಸಮುದಾಯ ಹಾಗೂ ಕ್ಷತ್ರಿಯ ಸಮುದಾಯಗಳಲ್ಲಿ ಮಾತಂಗಿ ಸಂಸ್ಕೃತಿ ವಹಿಸುವ ಪಾತ್ರ ವಿಶಿಷ್ಟವಾಗಿದೆ. ನೆಲ ಮತ್ತು ನೀರು ದೈವಕಲ್ಪನೆಯ ಜೊತೆ ಮಾತಂಗಿ ಸಂಸ್ಕೃತಿ ಕುಶಲಕರ್ಮಿ ಸಮುದಾಯಗಳಿಗೂ, ವೃತ್ತಿಗೂ ಹಾಗೂ ಮಾತಂಗಿಗೂ ಅಂತರ್ ಸಂಬಂಧದ ಬೆಸುಗೆ ತೋರುವುದೇ ಈ ಗ್ರಂಥದ ವೈಶಿಷ್ಟ್ಯವಾಗಿದೆ.

About the Author

ಶಿವಾನಂದ ಕೆಳಗಿನಮನಿ

ಲೇಖಕ ಶಿವಾನಂದ ಕೆಳಗಿನಮನಿ ಮೂಲತಃ ಧಾರವಾಡದವರು. ಪ್ರಸ್ತುತ ಶಿವಮೊಗ್ಗದ ಕುವೆಂಪು ಯ್ಯೂನಿವರ್ಸಿಟಿಯ ಕನ್ನಡ ಭಾರತಿಯ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಮಾತಂಗಿ ಸಂಸ್ಕೃತಿ ಅವರ ಸಂಶೋಧಕನಾತ್ಮ ಕೃತಿಯಾಗಿದ್ದು, ಈ ಕೃತಿಯನ್ನು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದೆ. ...

READ MORE

Related Books