ಗೌಡ ಜನಾಂಗ - ಇತಿಹಾಸ ಮತ್ತು ಸಂಸ್ಕೃತಿ ಎಂಬ ಪುಸ್ತಕವು ಕೆ.ಚಿನ್ನಪ್ಪ ಗೌಡ ಅವರ ಸಂಪಾದಕತ್ವದ ಕೃತಿ. ಹದಿನಾರು ಲೇಖನಗಳನ್ನೊಳಗೊಂಡ ಈ ಕೃತಿ ಗೌಡ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿಯನ್ನು ಬೇರೆ ಬೇರೆ ಕೋನಗಳಿಂದ ನೋಡುತ್ತದೆ. ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘವು ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ಪ್ರಕಟವಾದ ಕೃತಿ ಇದಾಗಿದೆ. ಈ ಗ್ರಂಥದಲ್ಲಿ ಮೂರು ವಿಭಾಗಗಳಿವೆ. ಮೊದಲನೆಯ ವಿಭಾಗವನ್ನು ಅಭಿನಂದನ ಅಭಿನಂದನ ಎಂದು ಹೆಸರಿಸಲಾಗಿದ್ದು ಇದರಲ್ಲಿ ಮೂರು ಲೇಖನಗಳಿವೆ. ಆದಿಚುಂಚನಗಿರಿಯ ಸಾಂಸ್ಕೃತಿಕ ಅವಲೋಕನ ಲೇಖನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೌರಾಣಿಕ, ಐತಿಹಾಸಿಕ, ಜಾನಪದ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಆಯಾಮಗಳ ಸಾಧನೆಗಳನ್ನು ವಿವರಿಸಲಾಗಿದೆ.
©2024 Book Brahma Private Limited.