‘ಬನವಾಸಿ ಕದಂಬರು’ ಕೃತಿಯು ಬಿ.ಎಚ್. ಶ್ರೀಧರ ಅವರು ರಚಿಸಿರುವ ಇತಿಹಾಸ ಕುರಿತ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಇತಿಹಾಸ- ಪುರಾಣಗಳಲ್ಲಿ ಪ್ರಸಿದ್ಧವಾಗಿ ಉಲ್ಲೇಖಿಸಲ್ಪಟ್ಟಿರುವ ಬನವಾಸಿ ಪಟ್ಟಣವು ಉತ್ತರ-ಕನ್ನಡ ಜಿಲ್ಲೆಯ “ಶಿರಸಿ ತಾಲೂಕಿನಲ್ಲಿ ಇದೆ. ಶಿರಸಿ ನಗರದಿಂದ ಬನವಾಸಿ ಪಟ್ಟಣಕ್ಕೆ 14 ಮೈಲು ದೂರ. ಈ ಪಟ್ಟಣವು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಮಧ್ಯದಲ್ಲಿದೆ. ಇಂಥ ಇತಿಹಾಸ ಪ್ರಖ್ಯಾತವಾದ ಬನವಾಸಿ ಪಟ್ಟಣದ ಮತ್ತು ಅದರ ಪ್ರಾಚೀನ ಚಕ್ರಾಧಿಪತ್ಯದ ಬಗ್ಗೆ ಸ್ವತಂತ್ರವಾದ ಒಂದು ಇತಿಹಾಸ ಗ್ರಂಥವನ್ನು ರಚಿಸಬೇಕೆಂದೂ: ಇದನ್ನು ಬನವಾಸಿಯ ಶೇತಕೀ ಶಾಲೆಯ ಶತಮಾನೋತ್ಸವದ ಕಾಲದಲ್ಲಿ ಪಕಟಿಸಬೇಕೆಂದೂ ನಿಶ್ಚಯಿಸಿ ಈ ಬಗ್ಗೆ ಒಂದು ಸಮಿತಿಯನ್ನು ರಚಿಸಲಾಯಿತು. ಬನವಾಸಿಯ ದೇವಾಲಯಗಳು, ನಡೆದು ಬಂದ ಮನೆತನಗಳು: "ಸದ್ಯದ ಜೀವನ ಮುಂತಾದ ವರ್ತಮಾನ ಸಂಗತಿಗಳನ್ನು ಸಂಗ್ರಹಮಾಡಿ ಇದರಲ್ಲಿ ಸೇರಿಸಲಾಗಿದೆ.
©2024 Book Brahma Private Limited.