‘ನಂಜುಂಡ ಕವಿಯ ರಾಮನಾಥಚರಿತೆ ಸಾಂಸ್ಕೃತಿಕ ಅಧ್ಯಯನ’ ಕೃತಿಯು ಎಮ್.ಎನ್. ತಳವಾರ ಅವರ ಅಧ್ಯಯನ ಕೃತಿಯಾಗಿದೆ. ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ ಅಥವಾ ರಾಮನಾಥ ಚರಿತೆ ಕನ್ನಡದ ಮೊಟ್ಟ ಮೊದಲ ಚಾರಿತ್ರಿಕಕಾವ್ಯವಾಗಿದೆ. ಕ್ರಿ.ಶ. 1508ರಲ್ಲಿದ್ದ ಮೂರನೆಯ ಮಂಗರಸನ ಮಗ ನಂಜುಂಡ.ಈತನು ತನ್ನ ಕೃತಿಯಲ್ಲಿ ಕಾಳಿದಾಸ, ಬಾಣ, ಪಂಪ, ನೇಮಿಚಂದ್ರ, ಜನ್ನ, ಗುಣನಂದಿ, ಗಜಗ, ಗುಣವರ್ಮ, ನಾಗಚಂದ್ರ, ಸುಜನೋತ್ತಂಸ, ಅಸಗ, ರನ್ನ, ಶಾಂತಿವರ್ಮ ಮುಂತಾದ ಪೂರ್ವಕವಿಗಳನ್ನು ಕಾವ್ಯದಲ್ಲಿ ಹೊಗಳಿದ್ದರ ಕುರಿತು ಕಾಣಬಹುದು. ಒಟ್ಟಾರೆಯಾಗಿ ಈ ಅಧ್ಯಯನ ಕೃತಿಯು ನಂಜುಂಡ ಕವಿಯ ಕಾವ್ಯದ ಆಳವನ್ನು ವಿವರಿಸುತ್ತದೆ.
©2024 Book Brahma Private Limited.