ಸರ್ಕಾರದ ಕಾನೂನುಗಳು ಹಾವಾಡಿಗ ಕರಡಿಯಾಡಿಸುವವರ ಕುಲಕುಸುಬುನ್ನು ನಂಭಿ ಬದುಕುತ್ತಿರುವ ಜನರನ್ನು ಪೇಚಿಗೆ ಸಿಲುಕಿಸಿದೆ . ಇವರ ಎರಡು ಹೊತ್ತಿನ ಊಟಕ್ಕೆ ಸಮಸ್ಯಯಾಗಿದೆ. ಕೋತಿ ಅಥವಾ ಕರಡಿ ಕುಣಿಸುವ ಜನರ ಬಳಿ ಕೋತಿ,ಕರಡಿ ಇಲ್ಲದಿರುದೆ ವಿಪರ್ಯಾಸ.ಈ ಅಲೆಮಾರಿ ಮದಾರಿ ಸಮುದಾಯ ಬೆರೆ ಸರಿಯಾದ ಜೀವನ ಮಾರ್ಗವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದೆ.
ಸರಕಾರ ಸರಿಯಾದ ಪುನರ್ವಸತಿ ಕಾರ್ಯ ಕೈಗೊಂಡಿಲ್ಲ.ಕಾನೂನು ನೆಪದಲ್ಲಿ ಪೊಲೀಸರು, ಪ್ರಾಣಿದಯಾ ಸಂಘಗಳು, ಅರಣ್ಯ ಇಲಾಖೆಯಿಂದ ಮದಾರಿ ಸಮುದಾಯ ಅನುಭವಿಸಿದ ನೋವು, ಕೆಲಸ ಕಳೆದುಕೊಂಡು ಬೀದಿಪಾಲಾದ ಸಂಕಟವನ್ನು ಮಸ್ತಕ ದಾಖಲಿಸಲಾಗಿದೆ.ಈ ಅಲೆಮಾರಿ ಮದಾರಿ ಸಮುದಾಯದ ಸ್ಥಿತಿಗತಿ ಬಗ್ಗೆ ವಿ.ಹರೀಶ್ ಕುಮಾರ್ ಅಧ್ಯಯನ ನಡೆಸಿ ಈ ಪುಸ್ತಕ ರಚಿಸಿದ್ದಾರೆ.
©2025 Book Brahma Private Limited.