ಮಹಾರಾಷ್ಟ್ರದ ಅಲೆಮಾರಿ ಸಮುದಾಯದವರಾಗಿದ್ದ ಕಚ್ಚೆಗೌಳಿಗರು ಪಶುಪಾಲನೆ ಮಾಡುತ್ತ ಕರ್ನಾಟಕದ ಪಶ್ಚಿಮಘಟ್ಟವನ್ನು ಪ್ರವೇಶಿಸಿ, ತಮ್ಮದೇ ಆದ ಮೂಲ ಪರಂಪರೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದವರು.
ಒಂದು ಕಾಲದಲ್ಲಿ ನಾಗರಿಕ ಪರಿಸರದಿಂದ ದೂರವಿದ್ದ ಇವರು ಆಧುನಿಕತೆಯ ಪ್ರಭಾವದಿಂದ ಇತರೆ ಸಮುದಾಯದವರೊಂದಿಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ. ಕಚ್ಚೆಗೌಳಿಗರಲ್ಲಿ ಇಂದು ಪಶುಪಾಲನೆ ಕಡಿಮೆ. ಅನೇಕರು ಕೃಷಿ, ಕೃಷಿಕೂಲಿ ಇತರೆ ವೃತ್ತಿಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ಅವುಗಳನ್ನು ಕುರಿತು ಲೇಖಕರು ಈ ಗ್ರಂಥದಲ್ಲಿ ಚರ್ಚಿಸಿದ್ದಾರೆ.
ಕಚ್ಚೆಗೌಳಿಗರ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಬದುಕಿನ ಚಿತ್ರಣವನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.