‘ರಾಧೇಯ’ ಕರ್ಣ: ಆರಂಭ, ಅಂತ್ಯ, ಅನಂತ ಇದು ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರ ಸಂಶೋಧನಾತ್ಮಕ ಕೃತಿ. ಕೃತಿಯ ಕುರಿತು ಬರೆಯುತ್ತಾ ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನ ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ: ದುರ್ಯೋಧನನ ಅನ್ನವನ್ನುಂಡು ಅವನಿಗೆ ಇದುರು ಬೀಳುವ ಇವರ ಸ್ವಭಾವ ಕಂಡು ಕರ್ಣನಿಗೆ ಅಪನಂಬಿಕೆ. ಭೀಷ್ಮನಿಗೆ ಪಟ್ಟ ಕಟ್ಟಿದಾಗ, ಈ ಮುಪ್ಪಿನ ಮುದುಕನು ಶತ್ರುಗಳನ್ನು ಹೇಗೆ ಎದುರಿಸಿ ನಿಲ್ಲಬಹುದು ತಾನೇ ಸಾಕಿದ ಮೊಮ್ಮಕ್ಕಳೊಡನೆ ಹೇಗೆ ಮನಸ್ಸಿಟ್ಟು ಕಾಡಬಹುದು- ಎಂದು ಕರ್ಣನಿಗೆ ಪ್ರಬಲವಾದ ಸಂದೇಹ. ಕುಲ ಕುಲ ಎಂದು ಮಾತೆತ್ತಿದ್ದಕ್ಕೆಲ್ಲಾ ತನ್ನ ಸೂತ ಕುಲವನ್ನು ದೂಷಿಸುವವರನ್ನು ಕಂಡು ಕರ್ಣನಿಗೆ ಸಹಿಸಲಾಗುವುದಿಲ್ಲ. ನಿಜವಾದ ಕುಲ ಯಾವುದೆಂದು ಕರ್ಣನು ತನ್ನ ಶೌರ್ಯವನ್ನು ತೋರಲು ಅವಕಾಶಕ್ಕಾಗಿ ಅತೊರೆಯುತ್ತಿದ್ದುದ್ದು, ವೀರನ ಉತ್ಸಾಹವನ್ನು ತೋರಿಸುತ್ತದೆ. ಜೊತೆಗೆ ಇವರೀರ್ವರ ಗುರು ಪರಶುರಾಮ ಆದುದರಿಂದ ಇವರು ಬಂಧುಗಳು ನೀನೆ ಮಗ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈ’ ಎಂದು ಭೀಷ್ಮನು ವಾತ್ಸಲ್ಯದ ಮಾತನ್ನಾಡಿದಾಗ, ಕರ್ಣನ ಮನಸ್ಸಿನ ದುಃಖವೆಲ್ಲವೂ ದೂರವಾಯಿತು. ಕುಲಹೀನನೆಂಬ ಅಪವಾದ ಈಗಾಗಲೇ ನನಗೆ ಬಂದಿರುವುದರಿಂದ, ಸಾವು-ಗೆಲುವುಗಳನ್ನು ಲೆಕ್ಕಿಸದೆ ನನ್ನ ಪೌರುಷದಿಂದ ನಿಮ್ಮನ್ನು ಮೆಚ್ಚಿಸುತ್ತೇನೆಂದ ಕರ್ಣನು. ಅರ್ಜುನನೊಂದಿಗೆ ನಡೆದ ಕಾಳಗದಲ್ಲಿ ಕರ್ಣನ ತೇಜಸ್ಸು ಪ್ರಜ್ವಲಿಸಿತು ಎಂದಿದ್ದಾರೆ ಲೇಖಕ ಡಾ. ವೆಂಕೋಬರಾವ್ ಎಂ, ಹೊಸಕೋಟೆ.
©2025 Book Brahma Private Limited.