ಬಿ.ಎನ್.ಭಟ್ಟರ ಸುದೀರ್ಘವಾದ ಅಧ್ಯಯನ, ಅಧ್ಯಾಪನದಿಂದಲೂ, ವೈದಿಕ ಪರಂಪರೆಯ ಕುಲಸಂಸ್ಕಾರ ಸೌಲಭ್ಯದಿಂದಲೂ ಭಗವದ್ಗೀತೆಯ ಆಳವಿಸ್ತಾರವನ್ನು ಮುಟ್ಟಲು ಅವರಿಗೆ ಸೌಕರ್ಯವಾಯಿತು. ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯ ಸಂದರ್ಭದಲ್ಲಿ ವಿಶ್ಲೇಷಣಾತ್ಮಕ ದೃಷ್ಟಿಯಿಂದ ಭಗವದ್ಗೀತೆಯ ತತ್ತ್ವಸಂದೇಶಗಳನ್ನು ನಿರ್ದಿಷ್ಟವಾಗಿ-ನಿರ್ದುಷ್ಟವಾಗಿ ಅರಿತು ಆಧುನಿಕ ಜಗತ್ತಿಗೆ ಅನ್ವಯಿಸಲು ಸಮರ್ಥರಾದ ಪ್ರೊ ಭಟ್ಟರು ಈ ಪುಸ್ತಕದಲ್ಲಿ ನಮ್ಮ ತನನನ್ನು ದಾಖಲಿಸಿದ್ದಾರೆ. ವ್ಯಕ್ತಿಯ ವಿಕಾಸವೇ ಗೀತೆಯ ಪ್ರಧಾನ ತಾ, ಆಹಾರ-ವಿಹಾರ-ಆರೋಗ್ಯ- ಯೋಗಾಭ್ಯಾಸಗಳಿಂದ ಶರೀರವನ್ನು ಪ್ರಾಣಾಯಾಮಾದಿಗಳಿಂದ ಮನಸನ್ನ, ಧ್ಯಾನಾದಿಗಳಿಂದ ಬುದ್ಧಿ-ಅಹಂಕಾರ-ಚಿತ್ತಾದಿಗಳನ್ನು ಸಂಸ್ಕಾರಗೊಳಿಸಿದಾಗ ವ್ಯಕ್ತಿಯ ವಿಕಾಸವಾಗುತ್ತದೆ. ಬೆಳಗುವುದೇ ವ್ಯಕ್ತಿತ್ವ ವಿಕಾಸ, ಇದನ್ನು ಭಗವದ್ಗೀತೆಯ ಆನ್ವಯಿಕ ಮಾಸವೆಂದು ಪ್ರೊ. ಭಟ್ಟರು 'ಚೆನ್ನಾಗಿ ನಿರೂಪಿಸಿದ್ದಾರೆ. ಆತ್ಮಕತ್ತ್ವ,ಯಜ್ಞತತ್ತ್ವ ಮನೋನಿಗ್ರಹ, ಜ್ಞಾನ-ವಿಜ್ಞಾನ ದರ್ಶನ, ತ್ರಿಗುಣ ಮೀಮಾಂಸೆ, ಧರ್ಮ-ಕರ್ಮಯೋಗ, ವಿಕಸಿತ ವ್ಯಕ್ತಿಯ ಪ್ರಬದ್ಧತೆ ಮತ್ತು ಸಿದ್ಧಿಮಾರ್ಗ, ಸಂದಿಗ್ದತೆ ಸಂಕಷ್ಟಗಳ ನಿರ್ವಹಣೆ ಹೀಗೆ ಭಗವದ್ಗೀತೆಯ ಹಲವು ಸಂದೇಶಗಳನ್ನು ಇಹಪರಗಳಿಗೆ ಅನ್ವಯವಾಗುವಂತೆ ಎಳೆ ಎಳೆಯಾಗಿ ಬಿಡಿಸಿ ಮನದಟ್ಟು ಮಾಡುವ ಈ ಮನದಟ್ಟು ಮಾಡುವ ಈ ಗ್ರಂಥವು ಸರ್ವಥ ಸಂಗ್ರಹಯೋಗ್ಯವಾಗಿದೆ. ನಮಗೂ ಪ್ರಿಯ, ಬಂಧು ಮಾರಿಗೂ ಇದೊಂದು ಉತ್ತಮ ಉಡುಗೊರೆಯಾಗಿದೆ. ಎಂದು ಶಿಕಾರಿಪುರ ಕೃಷ್ಣಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.