ನನ್ನ ಹಿಂದೂಧರ್ಮ ನಾ ಸೋಮೆಶ್ವರ ಅವರ ಕೃತಿಯಾಗಿದೆ. ವ್ಯಾಖ್ಯೆಯಿಲ್ಲದ ಧರ್ಮ, ನಿರ್ದಿಷ್ಟ ಅವಧಿಯಲ್ಲಿ ಜನಿಸದ ಸನಾತನಧರ್ಮ, ಒಬ್ಬನಿಂದ ಆರಂಭವಾಗದ ಪ್ರಾಕೃತಿಕ ಧರ್ಮ, ನಿರ್ದಿಷ್ಟ ಗ್ರಂಥವಿರದ ಧರ್ಮ, ಆಕ್ರಮಣಶೀಲದವಲ್ಲದ ಧರ್ಮ, ಮತಾಂತರಕ್ಕೆ ಒಲವನ್ನು ತೋರದ ಧರ್ಮ. ಎల్ల ಜೀವರಾಶಿಗೂ ಒಳಿತನ್ನೇ ಬಯಸುವ ವಿಶ್ವಧರ್ಮ, ವಿದೇಶಿ ಆಕ್ರಮಣಗಳಾದಾಗ ಮತ್ತೆ ಮತ್ತೆ ಪುಟಿದೆದ್ದು ನಿಂತ, ನಿಲ್ಲುತ್ತಿರುವ ಧರ್ಮ- ಹಿಂದೂಧರ್ಮ. ಮನುಕುಲಕ್ಕೆ ವೇದ, ಉಪನಿಷತ್ತು, ಭಗವದ್ಗೀತೆ ಮುಂತಾದ ಧರ್ಮ-ಹಿಂದೂಧರ್ಮ ಆದಿ ಸಾಹಿತ್ಯವನ್ನು ನೀಡಿದ ಹಿಂದೂಧರ್ಮದ ಸಿದ್ಧಾಂತಗಳೆಲ್ಲ ಚೆನ್ನಿರಬಹುದೇನೋ! ಆದರೆ ದಿನನಿತ್ಯದ ಸಾಮಾಜಿಕ ಬದುಕಿನಲ್ಲಿ ಹೆಮ್ಮೆ ಪಡುವಂತಹ ವಿಚಾರಗಳು ಕಡಿಮೆ. ಹಿಂದೂಧರ್ಮದ ಯಜ್ಞಯಾಗಾದಿಗಳಲ್ಲಿ ನಡೆಯುತ್ತಿದ್ದ ವಿಪರೀತ ಹಿಂಸೆ, ಜೈನ ಮತ್ತು ಬೌದ್ಧ ಧರ್ಮಗಳ ಹುಟ್ಟಿಗೆ ಕಾರಣವಾದದ್ದು ಸುಳ್ಳಲ್ಲ. ಸಾಂಖ್ಯ ಶ್ವಪಚ, ಅಗಸ್ತ್ರಕಬ್ಬಿಲ, ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪಕಮ್ಮಾರ, ರೋಮಜಕಂಚುಗಾರ, ಕೌಂಡಿಲ್ಯ ನಾವಿದನಾದರೂ ಅವರ ಬೌದ್ಧಿಕ ಪ್ರತಿಭೆಗೆ ಯಷಿಸ್ಥಾನವನ್ನು ನೀಡಿದ ಹಿಂದೂಧರ್ಮ, ಕರ್ಣನನ್ನು ಸೂತನೆಂದು ಹಳಿದದ್ದು, ಶಂಭೂಕನನ್ನು ಕೊಂದಷ್ಟು ಸೈದ್ಧಾಂತಿಕ ಶಿಥಿಲತೆಗೆ ಸಾಕ್ಷಿ ಎಂದು ನಾ ಸೋಮೆಶ್ವರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.