ಹಿರಿಯ ಲೇಖಕ ಕಡಿದಾಳ್ ಎಸ್. ರಾಮಪ್ಪಗೌಡ ಅವರು ಮಲೆನಾಡಿನ ಶ್ರೀವೈಷ್ಣವ ನಾಮಧಾರಿ ಗೌಡ ಸಂಸ್ಕೃತಿ ವಿಷಯವಾಗಿ ಬರೆದ ಸಂಶೋಧನಾ ಕೃತಿ. ಗೌಡ ಸಂಸ್ಕೃತಿಯು ಮಲೆನಾಡಿನ ಪ್ರಮುಖ ಸಂಸ್ಕೃತಿಯಾಗಿದ್ದು, ಶ್ರೀ ವೈಷ್ಣವ ನಾಮಧಾರಿಗಳೆಂದೂ ಪ್ರಸಿದ್ಧಿ. ನಾಮಧಾರಿ ಗೌಡ ಎಂಬ ಸಮೂದಾಯವಿದೆ. ಇವರು ಹಣೆಯ ಮೇಲೆ ದೊಡ್ಡ ನಾಮ ಹಾಕಿಕೊಳ್ಳುತ್ತಾರೆ. ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀರಾಮಾನುಜಾಚಾರ್ಯ ಅವರ ತತ್ವ ಅನುಯಾಯಿಗಳು ಎಂದು ಹೇಳಲಾಗುತ್ತದೆ. ಆದರೆ, ಈ ಸಮೂದಾಯವು ಒಕ್ಕಲಿಗರ ಉಪ ಪಂಗಡ ಎಂದೂ ಹಾಗೂ ಇನ್ನೂ ಕೆಲವರು ‘ಅಲ್ಲ’ ಎಂಬ ಪ್ರತಿಪಾದನೆಗೂ ಇವೆ. ನಾಮಧಾರಿ ಗೌಡರ ಜನಾಂಗೀಯ ಅಧ್ಯಯನ ಈ ಕೃತಿ ಸಂಶೋಧನೆಗೆ ಆಕರಗಳನ್ನು ಪೂರೈಸುತ್ತದೆ.
©2025 Book Brahma Private Limited.