ತುಳುನಾಡಿನ ಒಂದು ಪ್ರಾದೇಶಿಕ ಆಚರಣೆಯ ಪರಂಪರೆ ಮತ್ತು ಪರಿವರ್ತನೆ- ಈ ಕೃತಿಯು ಡಾ. ಇಂದಿರಾ ಹೆಗ್ಗಡೆ ಅವರು ರಚಿಸಿದ್ದು, ವಿಶೇಷವಾಗಿ ತುಳುನಾಡಿನ ಪ್ರಾದೇಶಿಕ ಆಚರಣೆಯೊಂದರ ಮೂಲ ಹುಡುಕುವ ಪ್ರಯತ್ನ ಕಾಣಬಹುದು. ತುಳುನಾಡಿನಲ್ಲಿ ಪ್ರಾಚೀನ ಸಂಸ್ಕೃತಿಯ ಬಿರ್ಮೆರ್ - ನಾಗ - ಭೂತ - ಮುಂತಾದ ದೈವಗಳ ಮೂಲಸ್ಥಾನ ಆದಿ - ಆಲಡೆ ಎಂದು ಕರೆಯಲಾಗುತ್ತಿದೆ. ಇಲ್ಲಿ ಮಾತೃವಂಶೀಯ ಮೂಲದ ಅನೇಕ ಕಡೆಗಳಲ್ಲಿ ಮನೆಯೊಳಗೆ ಅಥವಾ ಹೊರಗಡೆ ಬನದಲ್ಲಿ ಸ್ಥಾಪಿತವಾದ ಭೂತ - ನಾಗಗಳ ಕಲ್ಲು ಪ್ರತಿಮೆಗಳಿದ್ದು ಅವುಗಳ ಚಾರಿತ್ರಿಕ ಅಂಶಗಳನ್ನು ಲೇಖಕರು ತಮ್ಮ ಸಂಶೋಧನೆಯನ್ನು ಕೇಂದ್ರೀಕರಿಸಿದ್ದಾರೆ. ಈ ಸಂಸ್ಕೃತಿಗಳ ಅಧ್ಯಯನ - ಪರಿಚಯಗಳು, ಉಗಮ - ವಿಕಾಸ - ಪರಿವರ್ತನೆಗಳೆಂಬ ಮೂರು ನೆಲೆಗಳಲ್ಲಿ ಇಲ್ಲಿಯ ಅಧ್ಯಯನ ಸಾಗಿದೆ.
©2024 Book Brahma Private Limited.