ಕರ್ನಾಟಕದಲ್ಲಿ ಕ್ಷೇತ್ರಕಾರ್ಯಮಾಡಿ, ನಂತರ ತಮಿಳುನಾಡು ಮತ್ತು ಕೇರಳಕ್ಕೆ ಹೋಗಿ ಕ್ಷೇತ್ರಕಾರ್ಯ ಮಾಡಲಾಗಿದ್ದು ಈ ಅನುಭವವನ್ನು ‘ಸಂಚರ’ದಲ್ಲಿ ದಾಖಲಿಸಲಾಗಿದೆ. ಕ್ಷೇತ್ರಕಾರ್ಯದ ಫಲಿತಗಳನ್ನಷ್ಟೇ ಕೊಡುವ ಪಿಎಚ್.ಡಿ. ನಿಬಂಧಕ್ಕಿಂತ ಮೇಳೈಕೆಯ ವಿವರವಾದ ದಾಖಲೆಯು ಆಕರ್ಷಕ ಓದಿಗೂ ಮಾಹಿತಿಯ ವಿಪುಲತೆ ಮತ್ತು ವೈವಿಧ್ಯಕ್ಕೂ ಆಕರವಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಕರ್ನಾಟಕದಲ್ಲಿ ಕ್ಷೇತ್ರಕಾರ್ಯ ಮಾಡಿದಾಗ ಆದ ಕೆಲವು ಮರೆಯಲಾಗದ ಅನುಭವಗಳಷ್ಟೇ ದಾಖಲಾಗಿವೆ. ಮತ್ತೆ ಮತ್ತೆ ತಮಿಳುನಾಡು ಮತ್ತು ಕೇರಳದಲ್ಲಿ ಮಾಡಿದ ಕ್ಷೇತ್ರಕಾರ್ಯಗಳ ಪೈಕಿ ಮೂರು ಯಾತ್ರೆಗಳ ಅನುಭವಗಳಷ್ಟೇ ಲೇಖಕ ಪ್ರಣತಾರ್ತಿಹರನ್ ದಾಖಲಿಸಿದ್ದಾರೆ.
©2025 Book Brahma Private Limited.