‘ಹಾಲುಮತ ಶೋಧನೆ ಮತ್ತು ಸಡಗರ’ ಲಿಂಗದಹಳ್ಳಿ ಹಾಲಪ್ಪ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಪಶುಪಾಲಕ (ಕುರುಬ) ಜನಾಂಗವು ಭಾರತದ ಮೂಲ ಜನಾಂಗವಾಗಿದೆ ಮತ್ತು ಪ್ರಾಚೀನಪೂರ್ವ ಸಮುದಾಯವಾಗಿದೆ. ಸುಮಾರು 52 ಸಾವಿರ ವರ್ಷಗಳ ವ್ಯತ್ತಿ ಆಧಾರಿತ ಸುದೀರ್ಘ ಇತಿಹಾಸವಿರುವ ಹಾಲುಮತ ಸಮುದಾಯದ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆ ಶ್ರೀಮಂತವಾದದ್ದು. ಪದ್ಮಶ್ರೀ ವಿಜೇತ ವಿದ್ವಾಂಸ ಶ್ಯಾಮಸಿಂಗ್ ಶಶಿ ಅವರು ನುಡಿದ 'ನಾಗರಿಕ ಮಾನವನ ಚರಿತ್ರೆ ಆರಂಭವಾಗುವುದು ಕುರುಬರಿಂದ" ಎಂಬ ಮಾತು, ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ಜಗತ್ತಿನ ಎಲ್ಲ ಧರ್ಮಗಳು ವ್ಯಕ್ತಿ ಕೇಂದ್ರಿತ ಮತ್ತು ವ್ಯಕ್ತಿ ರೂಪಿತ ಧರ್ಮಗಳಾಗಿವೆ. ಆದರೆ ಹಾಲುಮತ ಧರ್ಮವು ಸಕಲ ಜೀವಿಗಳಿಗೆ ಅವಶ್ಯಕವಾದ ಜೀವರಸ 'ಹಾಲು' ರಸದಿಂದ ಜೀವತಳೆದ ಜಗತ್ತಿನ ಏಕೈಕ ಧರ್ಮವಾಗಿದೆ. ಹಾಲಿನಂತಹ ಗುಣವಿಶೇಷಣಗಳನ್ನು ಪಡೆದ ಧರ್ಮ ಹಾಲುಮತ, ಬೇರೆ ಧರ್ಮಗಳಿಗಿರುವಂತೆ ಒಬ್ಬ ಸಂಸ್ಥಾಪಕನಾಗಲಿ, ಪ್ರವಾದಿಯಾಗಲಿ, ಗುರುವಾಗಲಿ ಇದಕ್ಕಿಲ್ಲ. ಸೃಷ್ಟಿಯೇ ಹಾಲುಮತಕ್ಕೆ ಗುರು. ಪ್ರವಾದಿ, ಸಂಸ್ಥಾಪಕನಾಗಿದೆ. ಸೃಷ್ಟಿಯ ತತ್ವ-ಸಿದ್ಧಾಂತ, ಆಚಾರ-ವಿಚಾರ, ನಡೆ-ನುಡಿ, ರೀತಿ-ರಿವಾಜು, ರೂಡಿ-ಪದ್ಧತಿಗಳು ಮತ್ತು ಅದು ಹಾಕಿಕೊಟ್ಟ ನೂತನ ಧಾರ್ಮಿಕ, ಲೌಕಿಕ ಮಾರ್ಗ-ಸೂಚಿಗಳನ್ನು ಪ್ರಪಂಚದ ಅನೇಕ ಧರ್ಮಗಳು ತಮ್ಮ ಧರ್ಮಕ್ಕೆ ಎರವಲು ಪಡೆದಿವೆ. ವಿಶ್ವದ ಯಾವುದೇ ಧರ್ಮವು ಹಾಲುಮತ ತತ್ವಗಳಿಗೆ ಹೊರತಾಗಿಲ್ಲ. ಭಯ-ಭಕ್ತಿಯು. ನಾಡಪ್ರೇಮವು ಹಾಲುಮತಸ್ಥರ ವಂಶವಾಹಿನಿಯಲ್ಲಿ ಬೆರೆತುಹೋಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2025 Book Brahma Private Limited.