‘ಇಡಗುಂಜಿ-ಮುರ್ಡೇಶ್ವರ ಮತ್ತು ಇತರ ಕ್ಷೇತ್ರಗಳು ’ ಜೀಯು ಭಟ್ ಅವರ ಅಧ್ಯಯನ ಗ್ರಂಥವಾಗಿದೆ. ಉತ್ತರ ಕನ್ನಡ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರಗಳವೆ. ಗೋಕರ್ಣದ ಹೊರತಾಗಿ ಇಡಗುಂಜಿ ಮತ್ತು ಮುರ್ಡೇಶ್ವರ ನಿತ್ಯ ಸಹಸ್ರಾರು ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಈ ಕ್ಷೇತ್ರಗಳನ್ನು ರಾಷ್ಟ್ರದ ನಕ್ಷೆಯಲ್ಲಿ ಗುರುತಿಸುವಂತೆ ಬೆಳಸಿದ ಕೀರ್ತಿ ಇಬ್ಬರು ಪುಣ್ಯಾತ್ಮರಿಗೆ ಸಲ್ಲುತ್ತದೆ. ವಿ. ಡಾ. ಟಿ.ಎನ್. ಸಭಾಹಿತ ತಮ್ಮ ಕುಟುಂಬದ ಆಡಳಿತದಲ್ಲಿದ್ದ ದೇವಾಲಯವನ್ನು ಪರಿವರ್ತಿಸಿ ಎಲ್ಲರಿಗೆ ಸಮರ್ಪಿಸಿ, ಕ್ಷೇತ್ರದ ಬೆಳವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಮಗ ಡಾ. ಟಿ.ಟಿ. ಸಭಾಹಿತ ತಂದೆಯ ಹೆಜ್ಜೆಯಲ್ಲಿ ನಡೆಯುತ್ತ ಕ್ಷೇತ್ರವನ್ನು ಬೆಳೆಸಿದ್ದಾರೆ.
©2025 Book Brahma Private Limited.