ಸಮುದಾಯವೊಂದು ತನ್ನ ಚರಿತ್ರೆ, ಪುರಾಣಗಳನ್ನು ಕಟ್ಟಿಕೊಳ್ಳುವ ಪ್ರಯತ್ನಈ ಕೃತಿಯ ಬರಹಗಳಲ್ಲಿದೆ. ಮಾತಂಗರ ಕಥನ, ಆದಿಜಾಂಬವ ಚರಿತ್ರೆಯಂತಹ ಪುರಾಣ ಸಂಬಂಧಿ ಕಥನ ಕಟ್ಟುವ ಜೊತೆಗೆ ಹನ್ನೆರಡನೆ ಶತಮಾನದ ಶರಣ ಚಳವಳಿಗೆ ಅತ್ಯಂತ ಮಹತ್ವದ ಕಾಣಿಕೆ ಕೊಟ್ಟ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ ಮತ್ತು ಮರುಳು ಸಿದ್ದರಂತಹ ಶರಣರ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ತಿಳಿಸುವ, ಆ ಮೂಲಕ ಆದಿಜಾಂಬವ ಸಮುದಾಯಕ್ಕಿರುವ ಅನುಭಾವಿ ಪರಂಪರೆಯ ಪರಿಚಯ ಮಾಡುವ ಪ್ರಯತ್ನ ಮಾಡಿದ್ದಾರೆ. ಅಂಬೇಡ್ಕರ್‌ರ ವೈಚಾರಿಕತೆಯ ನೆಲೆಯಲ್ಲಿ ತಮ್ಮ ಪರಂಪರೆಯನ್ನು ನಿರೂಪಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಈ ಕೃತಿಯಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಅದರಲ್ಲಿ ಮುಖ್ಯವಾದುದು ಮಾತಂಗ ಕಥನ, ಆದಿಜಾಂಬವ ಚರಿತ್ರೆ, ಮಾದಾರಾ ಚೆನ್ನಯ್ಯ ಪರಿಚಯ, ಮಾದಾರ ಧೂಳಯ್ಯರ ಕಥನ, ಮಾದಿಗರ ಅನುಭಾವಿ ಮರುಳಸಿದ್ದರ ಕುರಿತ ವಿವರ.
©2025 Book Brahma Private Limited.