ಲೇಖಕ ಹಿ.ಚಿ. ಬೋರಲಿಂಗಯ್ಯ ಅವರು 'ದೇಸಿ ಕನ್ನಡ ಪರಂಪರೆ' ಕೃತಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯು ಶಿಷ್ಟಪರಂಪರೆಯಿಂದ ಹೊರತಾದ ಮೌಖಿಕ ಜಗತ್ತಿನ ದೇಸಿ ಧಾರೆಯಲ್ಲಿ ಹೇಗೆ ಬೆಳೆದುಬಂದಿದೆ ಎಂಬ ಬಹುಮುಖಿ ವಸ್ತುವನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಎರಡು ಸಾವಿರ ವರ್ಷಗಳ ಈ ಪರಂಪರೆ ಜನಪದ ಮತ್ತು ಬುಡಕಟ್ಟು ಕ್ಷೇತ್ರದಲ್ಲಿ ಬೆಳೆದುಬಂದ ಬಗೆಯನ್ನು ಇಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗಿದೆ.
©2024 Book Brahma Private Limited.