ಕಂನಾಡು ಎಂಬುದು ಊರ ಹೆಸರಿನ ಸೊಗಸೆ? ವೇದ ಕಾಲದವರ ಕತೆಯೇ? ಪಂಜಾಬಿನಿಂದ ಬಂಗಾಳದವರಗೆ ಕಂನಾಡದವರ ಪ್ರಭಾವ, ಕುರುಬರು, ತುರುಕಾರರು, ತುಳುವರು, ಕುಡು ಒಕ್ಕಲಿಗರು ಮಾತ್ರವಲ್ಲ; ಗೌಡರು-ಒಕ್ಕಲಿಗರು, ಪಾಟೀಲರು, ಬಿಲ್ಲವರು, ಅಂಬಿಗರು, ಬ್ರಾಹ್ನಣರು, ದೇಶಸ್ಥರು, ಸಾರಸ್ವತರು, ಹವ್ಯಕರು, ಯಜುರ್ವೇದಿಗಳು ಇವರೆಲ್ಲರೂ ಯಾರು? ಇವರ ಮೂಲವೇನು? ಆಚಾರ-ವಿಚಾರಗಳೇನು? ಸಂಸ್ಕೃತಿ ವೈಶಿಷ್ಟ್ಯವೇನು? ಯತಿಗಳು-ಜಂಗಮರು ಯಾರು? ಹೀಗೆ ಸಂಶೋಧನೆಯ ಆಳಕ್ಕೆ ಸೆಳೆಯುವ ಕೃತಿ -ಎಡೆಯರು ಹೇಳುವ ಕಂನಾಡ ಕತೆ. ಖ್ಯಾತ ಸಂಶೋಧಕ ಡಾ. ಶಂ.ಬಾ.ಜೋಶಿ ಅವರು ರಚಿಸಿದ್ದಾರೆ.
1937ರಲ್ಲಿ ಧಾರವಾಡದ ಮಾಧವ ಬಲ್ಲಾಳ ಬಂಧುಗಳು ಈ ಪುಸ್ತಕವನ್ನು ಪ್ರಕಟಿಸಿದ್ದರು.
©2024 Book Brahma Private Limited.