ಬುಡಕಟ್ಟು ಸಮಾಜದ ಆಚರಣೆಗಳ ವಿವರ ಈ ಕೃತಿಯಲ್ಲಿದ್ದು ಹುಟ್ಟಿನ ಸಂಸ್ಕಾರದಿಂದ ಹಿಡಿದು ಸಾವಿನ ಸಂಸ್ಕಾರದ ಮಧ್ಯೆ ಬರುವ ಹಲವು ಆಚರಣಾ ವಿಧಾನಗಳನ್ನು ಇಲ್ಲಿ ದಾಖಲಿಸಲಾಗಿದೆ.
ಹಸಲರು, ದೀವರು, ಕಾಡುಕುರುಬರು, ಜೇನುಕುರುಬರು, ಸೋಲಿಗರು, ಮ್ಯಾಸಬೇಡರು, ಗೌಳಿಗರು, ಕಾಡುಗೊಲ್ಲರು, ಹಾಲಕ್ಕಿಗಳು ಮತ್ತು ಗೊಂಡ ಸಮಾಜಗಳ ಅಧ್ಯಯನಗಳ ವಿವರವಿದೆ.
ಬುಡಕಟ್ಟುಗಳಲ್ಲಿ ಪ್ರಚಲಿತವಿರುವ ಸೃಷ್ಟಿ ಪುರಾಣಗಳು ,ಹುಟ್ಟಿನ ಸಂದರ್ಭದ ಆಚರಣೆಗಳ ವಿಶ್ಲೇಷಣೆ ,ಋತುಮತಿ ಸಂದರ್ಭದ ಆಚರಣೆಗಳ ವಿಶ್ಲೇಷಣೆ ,ಮದುವೆ ಸಂದರ್ಭದ ಆಚರಣೆಗಳ ವಿಶ್ಲೇಷಣೆ , ಸಾವಿನ ಸಂದರ್ಭದ ಆಚರಣೆಗಳ ವಿಶ್ಲೇಷಣೆ ,ಸಾವಿನ ನಂತರ ದೆವ್ವ-ಭೂತಗಳ ಪರಿಕಲ್ಪನೆ ಇವು ಕೃತಿಯಲ್ಲಿಯ ಪ್ರಮುಖ ಅಧ್ಯಯನಗಳಾಗಿವೆ.
©2024 Book Brahma Private Limited.