ಕವಿ ಜಿ.ವರದರಾಜರಾವ್ ಅವರು 1918 ಜನವರಿ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಭಾಷಾಂತರ ಕಚೇರಿಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಪುರಂದರ ದಾಸರ ಕೀರ್ತನೆಗಳು, ಸೀತಾ ಪರಿತ್ಯಾಗ ಸಮಸ್ಯೆಗಳು, ಕಲಿಕರ್ಣ, ಮಹಾಸತಿ ಕಸ್ತೂರಿ ಬಾ, ಕುಮ್ಮಟ ಕೇಸರಿ, ತೊರಣ, ಸೆರೆಯಾಳು, ತೊಟ್ಟಿಲು, ವಿಜಯದಶಮಿ, (ಕವನ ಸಂಗ್ರಹಗಳು), ಪಡಿನುಡಿ, ಸಾಹಿತ್ಯ ಸಾನಿಧ್ಯ, ಅಪ್ರತಿಮ ವೀರ ಚರಿತಂ, ಕುಮಾರ ರಾಮನ ಸಾಂಗತ್ಯ, ಓಬವ್ವ, ಜಗನ್ನಾಥದಾಸರು, ಬುಡುಬುಡುಕೆ (ಬಾಲಸಾಹಿತ್ಯ), ತೋಟ್ಟಿಲು, ಕುಮ್ಮಟ ದುರ್ಗ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ ದೇವರಾಜ ಬಹದ್ದೂರ್ ಬಹುಮಾನ, ಹರಿದಾಸ ಸಾಹಿತ್ಯ ಪ್ರಶಸ್ತಿ, ರಜತೋತ್ಸವ ಸ್ವರ್ಣ ಪದಕ ಪ್ರಶಸ್ತಿಗಳು ಲಭಿಸಿವೆ. 1987 ನವೆಂಬರ್ 13 ರಂದು ನಿಧನರಾದರು.