ಕೃಷಿ ವಿಜ್ಞಾನಿ, ಮತ್ತು ಲೇಖಕರೂ ಆದ ಡಾ. ಕೆ.ಎನ್. ಗಣೇಶಯ್ಯ ಅವರ ಕಥಾ ಸಂಕಲನ’ ಪೆರಿನಿ ತಾಂಡವ’.
ಪೆರಿನಿ ಎನ್ನುವುದು ಕ್ರಿ.ಶ 12 ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಪುರುಷ – ಪೌರುಷವನ್ನು ನಾಟ್ಯಕಲೆಯ ಸೌಂದರ್ಯದಲ್ಲಿ ಸೆರೆಹಿಡಿಯುವುದೇ ಈ ನೃತ್ಯದ ವಿಶೇಷತೆಯಾಗಿದೆ.
ಪೌರುಷದ ಉಗ್ರತೆಯನ್ನುಕಲೆಯಾಗಿಸುವ, ಪುರುಷತ್ವದಲ್ಲಿ ನಯ-ಸೌಂದರ್ಯ ಹುಡುಕುವ ಹಾಗೂ ವೀರತ್ವವನ್ನು ರಸಭಾವಗಳಲ್ಲಿ ತುಂಬುವ ಈ ನೃತ್ಯ ಕಲೆಯ ಹೆಸರನ್ನು ಈ ಕೃತಿಯ ಶೀರ್ಷಿಯನ್ನಾಗಿ ಇಡಲಾಗಿದೆ. ಇಲ್ಲಿನ ಒಂದು ಕತೆಯಲ್ಲಿ ಈ ನೃತ್ಯವು ಪ್ರಮುಖ ಪಾತ್ರವಹಿಸಿರುವುದರಿಂದ ಈ ಕಥಾಸಂಕಲನದ ಶೀರ್ಷಿಕೆಯಲ್ಲಿ ಬದುಕಿನ ಸುಂದರ ನಡೆಗಳು ಹೇಗೆ ತಾಂಡವ ರೂಪ ಪಡೆಯುತ್ತವೆ ಎನ್ನುವುದಕ್ಕೆ ಈ ಕಥಾ ಸಂಕಲನ ಸಾಕ್ಷಿಯಾಗಿದೆ. ಇಲ್ಲಿರುವ ಭೋಗ ನಿರ್ಭಾಗ್ಯ, ಗೌರವಾರಾಧನೆ, ತಾಂಡವ ಶಿಲ್ಪ ಎಂಬ ಮೂರು ನೀಳ್ಗತೆಗಳು ಪ್ರೀತಿ, ಪ್ರೇಮ, ಗೌರವ, ಆರಾಧನೆಗಳ ಸುಂದರ ಅನುಭವಗಳ ಮತ್ತು ಉಗ್ರ ರೂಪ ತಾಳುವ ಸಾಧ್ಯತೆಗಳನ್ನು ತಿಳಿಸುವಂತದ್ದಾಗಿದೆ.
©2024 Book Brahma Private Limited.