ಲೇಖಕಿ ಎಸ್.ವಿ ಪ್ರಭಾವತಿ ಅವರ ಕಾದಂಬರಿ ‘ಪಾವನಗಂಗೆಯರು ಸಂಪುಟ -4’ " ಅನುದಿನ(ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ಎಂಬ ಹೆಸರಿನಿಂದ ಪ್ರಕಟವಾಗಿದೆ. ಇದರ 4ನೇ ಸಂಪುಟ ಪಾವನಗಂಗೆಯರು ಸಂಪುಟ -4 (ದೇವಕಿ-ಶಾಕುಂತಲೆ).
ಲೇಖಕಿಯ ಮಾತಿನಂತೆ, ಕ ವಿ ಕಾ ದ ಮಂಜುಳಾ ಎಂಬಾಕೆ ಬಸ್ ನಲ್ಲಿ ನನ್ನ ಗುರುತು ಹಿಡಿದು ’ದೇವಕಿ’ ಬಗ್ಗೆ ಬರೆಯಿರಿ ಎಂದು ತಲೆ ಯಲ್ಲಿ ಹುಳಬಿಟ್ಟರು. ಎಲ್ಲಿ ಹುಡುಕಿದರೂ ಅವಳ ಕತೆ ಕಂಸವಧೆಗೆ ನಿಂತು ಹೋಗುತ್ತದೆ. ಆದರೆ ಕೃಷ್ಣನ ಕತೆ ಇದೆಯಲ್ಲಾ. ಕೃಷ್ಣ ಸಾಯುವವರೆಗೆ ದೇವಕಿಯ ದೃಷ್ಟಿ ಕೋನ ದಿಂದ ಯಾರೂ ಏನೂ ಬರೆದಿಲ್ಲ.ಈ ಅಂಶ ನನಗೆ ಪೂರಕವಾಗಿ ಒದಗಿತು. ಅದಾದ ಮೂರು ವರ್ಷಕ್ಕೆ ದೇವಕಿ ಪ್ರಕಟವಾದಳು. ಅದೇ ವರ್ಷ ಸಮಗ್ರ ಕಾದಂಬರಿಯೂ ಪ್ರಕಟವಾಯಿತು. ಈಗ ಈ ಸಮಗ್ರ ಕ್ಕೆ ಮರುಮುದ್ರಣದ ಯೋಗವೊದಗಿದೆ . ಅದು ಬೇರೊಂದು ರೂಪದಲ್ಲಿ ಬರಲಿದೆ ಎಂಬುದಾಗಿ ಅವರು ಹೇಳಿದ್ದಾರೆ.
©2024 Book Brahma Private Limited.