ಎಸ್ . ವಿ ಪ್ರಭಾವತಿ ಅವರ ಕೃತಿ ಪಾವನಗಂಗೆಯರು ಸಂಪುಟ -1. " ಅನುದಿನ( ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ( ಏಕೆಂದರೆ ಪ್ರತಿಭಾ ನಂದಕುಮಾರ್ ಅವರ ಆತ್ಮಕಥೆ ಯ ಹೆಸರು ಅನುದಿನದ ಅಂತರಗಂಗೆ ಎಂದಿದೆ ) ಎಂಬ ಹೆಸರಿನಿಂದ ಪ್ರಕಟವಾಗಿದೆ.
ಲೇಖಕಿಯ ಮಾತಿನಲ್ಲಿ, ‘.........ನೆನಪಿನಂಗಳದಲಿ ನಿಂತು ................ ಹದಿನೈದು ವರ್ಷಗಳ ನಂತರ ಹಿಂದಿರುಗಿ ನೋಡಿದಾಗ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ . ಕವಿತೆಗಳ ಮೂಲಕವೇ ಸಾಹಿತ್ಯ ಪತ್ರಿಕೆಗಳಲ್ಲಿ ಅಸ್ತಿತ್ವ ಹುಡುಕುತ್ತಿದ್ದ ನನಗೆ ಕಾದಂಬರಿ ಬರೆಯುವ ಪ್ರಸ್ತಾಪ ಒದಗಿದ್ದು ಆಕಸ್ಮಿಕವೇ . ವಾರಪತ್ರಿಕೆಯೊಂದಕ್ಕೆ ಬರೆದ ಅರವತ್ತು ಪುಟಗಳ " ದ್ರೌಪದಿ " ನವಕರ್ನಾಟಕ ಪ್ರಕಾಶನದ ರಾಜಾರಾಂ ಅವರ ಕಣ್ಣಿಗೆ ಬಿದ್ದದ್ದು , ಅವರು ಅದನ್ನು ಮೆಚ್ಚಿ , ಮೂರರಷ್ಟು ಮಾಡಿಕೊಟ್ಟರೆ ಪ್ರಕಟಿಸುವುದಾಗಿ ಹೇಳಿದ್ದು , ಬಿಡುವೇ ಇಲ್ಲ ಎಂದಿದ್ದ ಜಿ ವೆಂಕಟಸುಬ್ಬಯ್ಯನವರು ಅದನ್ನು ಬಹುವಾಗಿ ಮೆಚ್ಚಿ ಮುನ್ನುಡಿ ಬರೆದದ್ದು , ಲಂಕೇಶ್ ಪತ್ರಿಕೆ ಅದಕ್ಕೆ ನೆಗೆಟಿವ್ ಎಂಬಂತಹ ಪ್ರಚಾರ ಕೊಟ್ಟದ್ದು ........ಎಲ್ಲಾ ಮುಗಿದ ಕತೆಯಾದರೂ ಇದೀಗ ನಡೆದಂತೆ ಅನಿಸುತ್ತಿದೆ . ಹೀಗಾಗಿ ನನ್ನ ಮೊದಲ ಕಾದಂಬರಿ ಯಿಂದಲೇ ನನಗೆ ತುಂಬಾ ಪ್ರೋತ್ಸಾಹ , ಮೆಚ್ಚುಗೆ ಎಲ್ಲಾ ದೊರೆತವು . ಅದಕ್ಕೆ ಅತ್ತಿಮಬ್ಬೆ ಟ್ರಸ್ಟ್ ನ ಪ್ರಶಸ್ತಿ ದೊರೆತು ಮೂರು ಮುದ್ರಣ ಕಂಡು ಗುಲಬರ್ಗಾ ಮತ್ತು ಬಿಜಾಪುರ ವಿ ವಿ ಗಳ ಪಠ್ಯವಾಯಿತು’ ಎಂದಿದ್ದಾರೆ. ಅಲ್ಲದೆ, ’ದ್ರೌಪದಿ ಬರೆಯುತ್ತಿರುವಾಗಲೇ " ಕುಂತಿ " ಬಗ್ಗೆ ಬರೆಯಬಹುದೆಂದು ನನಗೆ ಅನಿಸುತ್ತಿತ್ತು . ಬೆಂಗಳೂರಿನ ಮಹಿಳಾ ಚಳವಳಿ ಯಲ್ಲಿ ಬೆರೆತ ಮೇಲೆ ಇಡೀ ರಾಮಾಯಣ ಮಹಾಭಾರತ ಗಳನ್ನು ಸ್ತ್ರೀ ವಾದೀ ದೃಷ್ಟಿಕೋನದಿಂದ ಬರೆಯಬಹುದೆಂಬ ಮಾತು ಮತ್ತೆ ಮತ್ತೆ ಕಿವಿಯ ಮೇಲೆ ಬಿದ್ದಾಗ "ಕುಂತಿ " ಹುಟ್ಟಿದಳು . ಇಲ್ಲಿ ಸ್ಮರಣ ತಂತ್ರ ಬಳಸದೇ ನೇರವಾದ ನಿರೂಪಣೆ ಬಳಸಿದೆ. ಎಲ್ ಎಸ್ ಶೇಷಗಿರಿರಾವ್ ಅವರು ಬರೆದ ಮುನ್ನುಡಿ ಯಲ್ಲಿ ನನ್ನನ್ನು ಹೊಗಳಿದ್ದಾರೊ ತೆಗಳಿದ್ದಾರೋ ತಿಳಿಯಲಿಲ್ಲ .ಕೆಲವರಂತೂ ಅವರು ಬರೆದ ಮುನ್ನುಡಿ ಯನ್ನು ಬಿಟ್ಟು ಪ್ರಕಟಿಸುವಂತೆ ನನಗೆ ಸೂಚಿಸಿದರು . ಆದರೆ ನಾನು ಹಾಗೆ ಮಾಡದೇ ಅವರು ಬರೆದುದನ್ನು ಯಥಾವತ್ತಾಗಿ ಬಳಸಿಕೊಂಡೆ . ಈಗ ನೋಡಿದರೆ ಅವರು ಬರೆದುದು ಅತ್ಯುತ್ಕೃಷ್ಟ ವಾದ ವಿಮರ್ಶೆ ಅನಿಸುತ್ತದೆ .ಕುಂತಿ ಬರೆದ ಮೇಲೆ ನನಗನ್ನಿಸಿತು ಈ ಎರಡೂ ಕಾದಂಬರಿಗಳ ಮೇಲೆ ಎಸ್ ಎಲ್ ಭೈರಪ್ಪನವರ " ಪರ್ವ " ದ ಗಾಢವಾದ ಪ್ರಭಾವಕ್ಕೆ ಒಳಗಾಗಿವೆ ಎಂದು . ಅದರಿಂದ ಬಿಡಿಸಿಕೊಳ್ಳಬೇಕು ಎಂದು .
©2024 Book Brahma Private Limited.