ಮಾಸ್ತಿಯವರ ಅತ್ಯಂತ ಜನಪ್ರಿಯ ನೀಳ್ಗತೆ ’ಸುಬ್ಬಣ್ಣ’. ಸಂಗೀತಗಾರನ ಬದುಕನ್ನು ಕೇಂದ್ರವಾಗಿಟ್ಟುಕೊಂಡ ಕತೆ. ನವರತ್ನ ರಾಮರಾಯರು ಹೇಳಿದ-ವರ್ಣಿಸಿದ ಸಂಗೀತಗಾರನ ಬದುಕನ್ನು ಆಧರಿಸಿ ಕತೆ ರಚಿಸಿರುವುದಾಗಿ ಮಾಸ್ತಿ ಹೇಳಿಕೊಂಡಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಹಾಗೂ ಸಂಗೀತದ ಬಗೆಗಿನ ಮಾಸ್ತಿಯವರ ಪ್ರೀತಿ-ಆಸ್ಥೆಗಳೆರಡೂ ಹದವಾಗಿ ಬೆರೆತಿವೆ. ಕಥಾನಾಯಕನ ಸಂಗೀತ ಪ್ರತಿಭೆ ಹಾಗೂ ಅವನ ಬದುಕು ನಡೆಸಿದ ಆಟಗಳನ್ನು ಮಾಸ್ತಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಓದಲು ಆರಂಭಿಸಿದ ಮೇಲೆ ಕೆಳಗಿಡದೇ ಮುಗಿಸುವಷ್ಟು ಚೆನ್ನಾಗಿದೆ. ಮೊದಲಿಗೆ ಈ ಕತೆಯು ಪ್ರಬುದ್ದ ಕರ್ನಾಟಕದಲ್ಲಿ ಪ್ರಕಟವಾಗಿತ್ತು. ನಂತರ 1935ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಸುಬ್ಬಣ್ಣ ಮಾಸ್ತಿಯವರ ಯಶಸ್ವಿ ನೀಳ್ಗತೆ.
©2024 Book Brahma Private Limited.