ಬೀchi ನೀಳ್ಗತೆ ಪ್ರಕಾರದಲ್ಲಿ ಪ್ರಕಟಿಸಿದ ಏಕೈಕ ಕೃತಿ ಇದು. ಇಪ್ಪತ್ತೇಳು ಪತ್ರೋತ್ತರಗಳ ರೂಪದಲ್ಲಿ ಕತೆ ಹರಡಿಕೊಂಡಿದೆ. ಬೀchiಯವರ ಈ ನೀಳ್ಗತೆ 'ಪ್ರಜಾಮತ' ವಾರಪತ್ರಿಕೆಯಲ್ಲಿ ಮೊದಲು ಧಾರವಾಹಿಯಾಗಿ ಪ್ರಕಟಗೊಂಡಿದ್ದು 1962ರಲ್ಲಿ ಪುಸ್ತಕ ರೂಪದಲ್ಲಿ ಹೊರಬಂದಿದೆ.
ಬೀಚಿ ಕತೆಗೆ ಬರೆದ ಮುನ್ನುಡಿಯಲ್ಲಿ, ’ಕತೆ, ಪಾತ್ರಗಳು, ಸನ್ನಿವೇಶಗಳು ಕೇವಲ ನೆಪಕ್ಕೆ! just & peg to hang on ಅಂದಂತ, ಇವೆಲ್ಲವೂ ಸಾಮಗ್ರಿ ಮಾತ್ರ. ಹಲಕೆಲವು ವಿಷಯಗಳ ಬಗ್ಗೆ ನಿರ್ದಿಷ್ಟವಾಗಿ ಅಭಿಪ್ರಾಯಗಳನ್ನು ಮಂಡಿಸುವುದಷ್ಟೇ ಮುಖ್ಯ ಗುರಿ’ ಎಂದಿದ್ದಾರೆ.
ಮೌಢ್ಯ ಮತ್ತು ದೇವರ ಹೆಸರಿನಲ್ಲಿ ಹಣ ಸುಲಿಗೆ ಮಾಡುವವರನ್ನು ಕೃತಿಯಲ್ಲಿ ಕಟುವಾಗಿ ಟೀಕಿಸಲಾಗಿದೆ.
©2024 Book Brahma Private Limited.