‘ಸಿಂಧೂರ ರೇಖೆಯ ಮಿಂಚು’ ಪ್ರಸನ್ನ ವಿ. ಚೆಕ್ಕೆಮನೆ ಅವರ ನೀಳ್ಗತೆಗಳ ಸಂಕಲನವಾಗಿದೆ. 'ಇನ್ನೂ ನಿಂಗೆ ಬುದ್ಧಿ ಬಂದಿಲ್ಲ ಅಲ್ವಾ? ಇಂದು ಕೂಡ ಅವಳ ಬಳಗೇ ಹೋಗಿದ್ದು ಅಂತ ನಮಗೆ ಗೊತ್ತಿಲ್ಲ ಅಂತ ಭಾವಿಸ್ಬೇಡಾ" ಕೆಳಗಿನಿಂದ ಮಾವನ ದೊಡ್ಡ ದನಿ ಕೇಳೀ ಫಕ್ಕನೆ ಎಚ್ಚರವಾಯಿತು ಬೀಪ್ತಿಗೆ. ಓಹ್! ತಾನು ತುಂಬ ಹೊತ್ತು ಮಲಗಿಬಿಟ್ಟೆನೇ ಅಂತ ಗಡಬಡಿಸಿ ಎದ್ದವಳು ಗೋಡೆ ಗಡಿಯಾರದತ್ತ ದೃಷ್ಟಿ ಹಾಸಿದಾಗ ಐದೂ ಕಾಲು ಎಂದು ತೋಲಿಸುತ್ತಿತ್ತು. "ನಿನ್ನ ಹೆಂಡ್ತಿ ಇಲ್ಲರುವಾಗ ನೀನು ಅವಳನ್ನು ಹುಡುಕಿಕೊಂಡು ಹೋಗುವ ಕಾರಣವಾದರೂ ಏನಿತ್ತು? ನಿನ್ನ ಹೋದವನು ಬರುವುದು ಇಂದು! ಇದರ ಅರ್ಥವೇನು?" ಮಾವನ ದನಿ ಮತ್ತಷ್ಟು ಅಪ್ಪಆಸಿದಂತೆ ಕೇಳಸಿದಾಗ ಹಾಸಿಗೆಯಿಂದ ಎದ್ದು ಕಿಟಿಕಿಯ ಪಕ್ಕದಲ್ಲಿ ಬಂದು ನಿಂತಳು. ಮೊನ್ನೆ ತಾನೇ ನೂತನ ವಧುವಾಗಿ ಈ ಮನೆಯ ಹೊಸಿಲು ತುಳಿದು ಬಲಗಾಲಿಟ್ಟು ಒಳಗೆ ಬಂದವಳು ದೀಪ್ತಿ. ಕಾಲೇಜ್ ಪ್ರೊಫೆಸರ್‌ಗಳಾಗಿರುವ ಶ್ರೀಕಾಂತ್ ಹಾಗೂ ನೀರಜಾ ಇವರ ಏಕೈಕ ಪುತ್ರ ಶ್ರೇಯಸ್‌ನ ಮಡವಿ ಅವಳು. "ನಾನು ಈಗ ಮದುವೆ ಬೇಡ ಅಂದರೂ ಬಲವಂತವಾಗಿ ಮದುವೆ ಮಾಡಿಸಿದ್ದು ಯಾರು? ನಾನು ಮೊದಲೇ ಹೇಳಿಲ್ವಾ?" ಶ್ರೇಯಸ್‌ನ ದನಿ ಕೇಳಿಸಿದಾಗ ದೀಪ್ತಿಯ ಎದೆಯಲ್ಲಿ ಏನೋ ನಡುಕವುಂಟಾಯಿತು. 'ಛೇ..ಇವರಿಗೆ ಈ ಮದುವೆ ಇಷ್ಟವಿರಲಿಲ್ಲವೇ? (ಆಯ್ದ ಭಾಗ)
©2025 Book Brahma Private Limited.