ಇಟ್ಟ ಹೆಜ್ಜೆ ಮುಂದಕೆ

Author : ಆರ್.ವಿ. ಭಂಡಾರಿ

Pages 36

₹ 7.00




Year of Publication: 2000
Published by: ಬಂಡಾಯ ಪ್ರಕಾಶನ
Address: ಅರೇಅಂಗಡಿ, ಹೊನ್ನಾವರ, ಉತ್ತರ ಕನ್ನಡ- 581430

Synopsys

‘ಇಟ್ಟ ಹೆಜ್ಜೆ ಮುಂದಕೆ’ ಲೇಖಕ ಡಾ.ಆರ್.ವಿ. ಭಂಡಾರಿ ಅವರ ನೀಳ್ಗತೆ. ಕೃತಿಯ ಕುರಿತು ಬರೆಯುತ್ತಾ ಇಟ್ಟ ಹೆಜ್ಜೆ ಮುಂದಕೆ ನವಸಾಕ್ಷರರ ಹಾಡಿನ ಒಂದು ಸಾಲು, ಈ ಸಾಲು ಈ ಕತೆಯ ಉಸಿರು. ಇದೊಂದು ನೀಳ್ಗತೆ. ನವಸಾಕ್ಷರರಿಗಾಗಿ ರಚಿಸಿದ್ದು, ನವಸಾಕ್ಷರರಿಗಾಗಿ ನಾನು ರಚಿಸಿದ ಪುಸ್ತಕಗಳಲ್ಲಿ ಇದು ಮೂರನೆಯದು. ಮೊದಲನೇಯದು ಕೇವಲಸಹಿ-ನಾಟಕ, ಎರಡನೇಯದು ಐದು ಯಕ್ಷಗಾನ ಏಕಾಂಕ. ಇದು ನನ್ನ ಮಟ್ಟಿಗೆ ಲಾಭದಾಯಕ ವ್ಯವಹಾರವಲ್ಲ. ನಾವು ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಿದುದ್ದು, ನವಸಾಕ್ಷಕರಿಗೆ ಉತ್ತಮ ಓದನ್ನು ಒದಗಿಸಬೇಕೆಂಬ ವೈಯಕ್ತಿಕ ಬಯಕೆಯ ಫಲ ಇದಾಗಿದೆ ಎಂದಿದ್ದಾರೆ ಲೇಖಕ ಆರ್.ವಿ. ಭಂಡಾರಿ.

About the Author

ಆರ್.ವಿ. ಭಂಡಾರಿ
(05 May 1936)

ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ  ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...

READ MORE

Related Books