"ಕಥೆಯೆಂಬ ಕನ್ನಡಿಯಲ್ಲಿ" ಸೌಜನ್ಯ ದತ್ತರಾಜ ಅವರ ಕಥಾಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಅಪೂರ್ವ ಅಜ್ಜಂಪುರ ಅವರು, ಸೌಜನ್ಯ ದತ್ತರಾಜ ಅವರ ಕಥಾಸಂಕಲನವು ನಗರಜೀವನದ ಹೆಣ್ಣುಮಕ್ಕಳ ಬದುಕಿನ ಹೊಸತೊಂದು ಲೋಕವನ್ನು ನಮಗೆ ಪರಿಚಯಿಸುತ್ತದೆ. ಲೇಖಕಿಯ ದೃಷ್ಟಿಕೋನ, ಭಾವನೆಗಳು, ಸಮಸ್ಯೆಯ ಬುಡದಲ್ಲೇ ಕಂಡುಕೊಳ್ಳುವ ಪರಿಹಾರಗಳು ವಿಶಿಷ್ಟವೆನಿಸುತ್ತವೆ. ಇಲ್ಲಿನ ಪಾತ್ರಗಳ ಮೂಲಕ ಆಧುನಿಕ ಸ್ತ್ರೀಯರ ಅನೇಕ ಸಮಸ್ಯೆ, ಸಂಕೀರ್ಣತೆ ಮತ್ತು ನಿರೀಕ್ಷೆಗಳಿಗೆ ಈ ಕೃತಿಯಲ್ಲಿ ಸೌಜನ್ಯ ಕಥಾರೂಪ ಕೊಟ್ಟಿದ್ದಾರೆ. "ಅರುಣೋದಯ", "ಜಡೆ", "ಮಂಥನ", "?....!", "ಆಯ್ಕೆ" ಕಥೆಗಳಲ್ಲಿ ಲೇಖಕಿಯ ನವೀನ ಚಿಂತನೆಯ ಹೊಳಹು ಮಿಂಚುವುದನ್ನು ಕಾಣಬಹುದು ಎಂದಿದ್ದಾರೆ.
©2025 Book Brahma Private Limited.