ಲೇಖಕಿ ಗಾಯತ್ರಿ ರಾಜ್ ಅವರ ನೀಳ್ಗತೆ ಕೃತಿ ʻಟ್ರಾಯ್ʼ. ಗ್ರೀಕ್‌ನ ಅತ್ಯಂತ ಭೀಕರ ಎಂದು ವಿಶೇಷಿಸಲ್ಪಡುವ ʻಟ್ರೋಜನ್ʼ ಯುದ್ದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆಯ ಕುರಿತು ಪುಸ್ತಕ ಹೇಳುತ್ತದೆ. ಟರ್ಕಿಯ ಟ್ರಾಯ್ ನಗರದ ಪ್ರಿಯಾಂ ರಾಜನ ಮಗ ಅಲೆಕ್ಸಾಂಡರ್ ಹಾಗೂ ಅದ್ಭುತ ಸೌಂದರ್ಯವತಿಯಾದ ಸ್ಪಾರ್ಟಾ ರಾಜಧಾನಿಯ ಮೆನೀಲಸ್ ರಾಜನ ಪತ್ನಿ ಹೆಲೆನ್ ಪರಸ್ಪರ ಪ್ರೀತಿಸಿ ಓಡಿಹೋದ ಕಾರಣ ಅಚೆಯನ್ನರು (ಗ್ರೀಕರು) ಟ್ರಾಯ್ ನಗರದ ಮೇಲೆ ದಾಳಿಮಾಡಿದರು. ಹೀಗೆ ಇವರಿಬ್ಬರ ಪ್ರೀತಿ ಮಹಾನ್ ಯುದ್ದಕ್ಕೆ ನೇರ ಕಾರಣವಾಯಿತು. ಈ ಪ್ರೇಮ ಕತೆಯನ್ನು ಗಾಯತ್ರಿ ರಾಜ್ ಅವರು ಪುಸ್ತಕದಲ್ಲಿ ತಂದಿದ್ದಾರೆ. ಆದರೆ ಈ ಯುದ್ದದ ಬಗ್ಗೆ ಇಂದಿಗೂ ಗ್ರೀಕ್ ಇತಿಹಾಸದಲ್ಲಿ ತರ್ಕಗಳಿವೆ. ಕೆಲವರು ಇದನ್ನು ಕಾಲ್ಪನಿಕ ಎಂದು ಕರೆದರೆ ಕೆಲವರು ಪೌರಾಣಿಕ ಎನ್ನುತ್ತಾರೆ. ಜನಪದ ಕಥೆ ಅಂತನೂ ವಾದಿಸುವ ಗುಂಪುಗಳಿವೆ.
©2025 Book Brahma Private Limited.